ಬೆಂಗಳೂರು, ಆ.1: ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ರೆಡ್-ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಸಹ ಮನಕಲಕುವ ರೀತಿಯಲ್ಲಿ ಗುಡ್ಡ ಕುಸಿದಿದೆ. ಇತ್ತ ಕೇರಳದಲ್ಲಿ ಭೀಕರ ಭೂಕುಸಿತವಾಗಿದ್ದು, ಅಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ನೂರಾರು ಸಂಖ್ಯೆ ದಾಟಿದೆ. ಅಲ್ಲಿನ ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಪ್ರಯತ್ನ ಮಾಡುತ್ತಿರುವುದು ಒಂದು ಕಡೆಯಾದರೆ, ಇದ್ಯಾವುದರ ಚಿಂತೆಯಿಲ್ಲದೇ ಬರೀ ರಾಜಕೀಯ ಮಾಡುವ ಉದ್ದೇಶದಿಂದ ಮುಡಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಸಜ್ಜಾಗಿರುವುದನ್ನು ನೋಡಿ ಜನ ನಗಾಡಲ್ವಾ? ವಿರೋಧ ಪಕ್ಷದಲ್ಲಿದ್ದುಕೊಂಡು ಜನರ ಕಷ್ಟಗಳನ್ನು ತಿಳಿಯದ ಬಿಜೆಪಿಯಿಂದ ರಾಜ್ಯದ ಜನ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿರೋಧ ಪಕ್ಷದಲ್ಲಿದ್ದುಕೊಂಡು ಜನರ ಕಷ್ಟಗಳನ್ನು ತಿಳಿಯದ ಬಿಜೆಪಿ: ಸಚಿವ ರಾಮಲಿಂಗಾರೆಡ್ಡಿ
ವಿರೋಧ ಪಕ್ಷದಲ್ಲಿದ್ದುಕೊಂಡು ಜನರ ಕಷ್ಟಗಳನ್ನು ತಿಳಿಯದ ಬಿಜೆಪಿ: ಸಚಿವ ರಾಮಲಿಂಗಾರೆಡ್ಡಿ
Date: