Monday, January 20, 2025
Monday, January 20, 2025

ಜಯಪುರ: 11-12ನೇ ಶತಮಾನದ ಶಾಸನೋಕ್ತ ವೀರಗಲ್ಲು ಪತ್ತೆ

ಜಯಪುರ: 11-12ನೇ ಶತಮಾನದ ಶಾಸನೋಕ್ತ ವೀರಗಲ್ಲು ಪತ್ತೆ

Date:

ಉಡುಪಿ: ಜಯಪುರದ ಭುವನಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳವನಕೊಡಿಗೆ ಗ್ರಾಮದ ಅರ್ದಳ್ಳಿಯ ಕಾಗಿನಕಾಡು ಎಂಬ ಸರಕಾರಿ ಅರಣ್ಯ ಪ್ರದೇಶದಲ್ಲಿ ದಶಕಗಳ ಹಿಂದೆ ಚಂದ್ರಶೇಖರಯ್ಯನವರು ಪತ್ತೆ ಮಾಡಿದ ಶಾಸನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ್ ಕಲ್ಕೆರೆ ಪುನರ್ ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಈ ವೀರಗಲ್ಲಿನ ಪ್ರಾರಂಭಿಕ ಅಧ್ಯಯನವನ್ನು ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕರಾದ ಡಾ.ಗುರುಮೂರ್ತಿ ಕಮಲೆ ಅವರು ಮಾಡಿದ್ದು ಆದರೆ ಲಿಪಿಯನ್ನು ಓದಲು ಅಸಾಧ್ಯವಾಗಿತ್ತು ಎಂದು ತಿಳಿಸಿದ್ದರು. ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಈ ಶಾಸನೋಕ್ತ ವೀರಗಲ್ಲಿನ ಪಠ್ಯವನ್ನು ಪುರಾತತ್ವ ಮತ್ತು ಇತಿಹಾಸ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ ಅವರು ಓದಿ, ಅರ್ಥೈಸುವ ಪ್ರಯತ್ನವನ್ನು‌ ಮಾಡಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ವೀರಗಲ್ಲು ಸುಮಾರು 6 ಅಡಿ ಎತ್ತರ ಹಾಗೂ 2.5 ಅಡಿ ಅಗಲವಿದ್ದು 3 ಪಟ್ಟಿಕೆಯನ್ನು ಒಳಗೊಂಡಿದೆ. ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವ ವೀರನ ದೃಶ್ಯವನ್ನು ಕೆತ್ತಲಾಗಿದ್ದು, ಎರಡನೆಯ ಪಟ್ಟಿಕೆಯಲ್ಲಿ ಮರಣ ಹೊಂದಿದ ಈ ವೀರನ ಜೊತೆ ಪೀಠದಲ್ಲಿ ಕೈಮುಗಿದು ಕುಳಿತಿರುವ ಮುನಿಗಳ ಕೆತ್ತನೆಯನ್ನು ಮಾಡಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಪೀಠದಲ್ಲಿ ಕುಳಿತಿರುವ ವೀರನಿಗೆ ಗಜಗಳು ಅಭಿಷೇಕ ಮಾಡುವ ದೃಶ್ಯದ ಕೆತ್ತನೆ ಇದೆ. ವೀರಗಲ್ಲಿನ ಕೆಳಗಿನ ಎರಡು ಪಟ್ಟಿಕೆಗಳಲ್ಲಿ 11- 12ನೆ ಶತಮಾನಕ್ಕೆ ಸೇರಿದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ 12 ಸಾಲಿನ ಶಾಸನವನ್ನು ಕೊರೆಯಲಾಗಿದೆ. ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಅಳಿದುಳಿದ ಲಿಪಿಯ ಆಧಾರದ ಮೇಲೆ ಓದಲು ಪ್ರಯತ್ನಿಸಿದಾಗ ವೀರಗಲ್ಲಿನಲ್ಲಿ ಚೈತ್ರ ಮಾಸ, ಸುದ್ದ 5 ಆದಿವಾರ ಎಂದಿದೆ.

ಶಾಸನದಲ್ಲಿ ಮಹಾಮಂಡಲೇಶ್ವರ ಮ(ಹಾ)ದೇವನ ಉಲ್ಲೇಖವಿದ್ದು ಹಾಗೆಯೇ ಹಿರಿಯ ಹೆಗಡೆ, ಮೂಡವೆಗ್ಗಡೆ, ಸಿದ್ದದೇವ, ವೀರಕನರ ಹಾಗೂ ಸಂಧಿ ವಿಗ್ರಹಿ ವೇದ್ಯ ಶಾಂತ್ಯನೊ ನಾಮವಗ್ಗಡೆ ಎಂಬ ವ್ಯಕ್ತಿಗಳ ಉಲ್ಲೇಖವಿದೆ‌. ಈ ಪ್ರದೇಶವು ಕಲ್ಯಾಣ ಚಾಲುಕ್ಯರ ಸಾಮಂತರಾದ ಹೊಂಬುಜದ ಸಾಂತರರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಪತ್ತೆಯಾದ ಶಾಸನೋಕ್ತ ವೀರಗಲ್ಲು ಸಹ ಸಾಂತರರ ಕಾಲಕ್ಕೆ ಸೇರಿರಬಹುದೆಂದು ನ.‌ ಸುರೇಶ ಕಲ್ಕೆರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಹುರುಳೀಹಕ್ಲು ರಾಜೇಂದ್ರ, ಸುಧೀರ್, ಸುಜನ ಹಾಗೂ ಅರ್ದಳ್ಳಿಯ ಹರಿಪ್ರಕಾಶ್ ಹೆಬ್ಬಾರ್ ಅವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!