ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಯುವವಾಹಿನಿಯು ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಅನ್ನ, ಅಕ್ಷರ, ಆಸರೆ ಎಂಬ ಧ್ಯೇಯದೊಂದಿಗೆ ಬಡವರಿಗೆ, ನೊಂದವರಿಗೆ, ಸೂರು ಕಲ್ಪಿಸಿಕೊಡುವ ಯುವವಾಹಿನಿ (ರಿ.) ಉಡುಪಿ ಘಟಕದ ‘ತಲೆಗೊಂದು ಸೂರು’ ಎಂಬ ಪರಿಕಲ್ಪನೆಯಡಿ ಐದನೇ ಮನೆಯ ಹಸ್ತಾಂತರ ಕಾರ್ಯಕ್ರಮ ಕಡೆಕಾರ್ ಲಯನ್ಸ್ ಕಾಲೊನಿಯಲ್ಲಿ ನಡೆಯಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡುತ್ತಾ, ಯುವವಾಹಿನಿಯ ಹಲವಾರು ಯೋಜನೆಗಳಲ್ಲಿ ತಲೆಗೊಂದು ಸೂರು ಯೋಜನೆ ಶ್ರೇಷ್ಠ ಯೋಜನೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮಾತನಾಡಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಯುವವಾಹಿನಿ ಉಡುಪಿ ಘಟಕ ಹತ್ತು ಹಲವು ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಜನಸ್ನೇಹಿ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಜಗದೀಶ್ ಕುಮಾರ್, ಕಾರ್ಯಕ್ರಮ ಸಂಚಾಲಕ ರಘುನಾಥ್ ಮಾಬಿಯಾನ್, ಕಾರ್ಯದರ್ಶಿ ಮಾಲತಿ ಅಮೀನ್, ಮಹಿಳಾ ಸಂಚಾಲಕಿ ನವೀಶಾ ಮೊದಲಾದವರು ಉಪಸ್ಥಿತರಿದ್ದರು.