ಉಡುಪಿ: ಸೆಪ್ಟಂಬರ್ 27ರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಸುಸ್ಥಿರ, ಪರಿಸರ ಪೂರಕ, ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೊಸ ಜಾಗಗಳನ್ನು ಪರಿಚಯಿಸುವ ಸಲುವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ವೀಡಿಯೋ ಸ್ಪರ್ಧೆ ಏರ್ಪಡಿಸಲಾಗಿದೆ.
ಈಗಾಗಲೇ ಪ್ರಸಿದ್ದವಾಗಿರುವ ಜಾಗವನ್ನು ಹೊರತುಪಡಿಸಿ, ಜನರನ್ನು ಆಕರ್ಷಿಸಬಲ್ಲ, ಕಲೆ, ಕರಕುಶಲಕರ್ಮಿಗಳಿಗೆ ಅವಕಾಶ ನೀಡಬಲ್ಲ ಹೊಸ ಜಾಗಗಳ ಕುರಿತ 3 ನಿಮಿಷ ಮೀರದ ವಿಡಿಯೋಗಳನ್ನು ಇಮೇಲ್ [email protected] ಅಥವಾ ವಾಟ್ಸಾಪ್ ಸಂಖ್ಯೆ 8660881493 ಗೆ ಸೆಪ್ಟಂಬರ್ 25 ರೊಳಗೆ ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ತಿಳಿಸಿದ್ದಾರೆ.