ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಈಶ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಮಣ್ಣು ಉಳಿಸಿ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರಾದ ಮತ್ತು ನಿಟ್ಟೆ ಯುನಿವರ್ಸಿಟಿ ಪ್ರೊಫೆಸರ್ ಸಭ್ಯತ್ ಶೆಟ್ಟಿಯವರು ಸದ್ಗುರು ಜಗ್ಗಿ ವಾಸುದೇವ್ ಅವರು ಸಂಘಟಿಸಿ ನಡೆಸುತ್ತಿರುವ ವಿಶ್ವಮಟ್ಟದ ಮಣ್ಣು ಉಳಿಸಿ ಅಭಿಯಾನದ ಹಿನ್ನೆಲೆ, ಮಹತ್ವವನ್ನು ವಿವರಿಸಿದರು.
ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರಾದ ಯಶ್ ಶೆಟ್ಟಿ, ಮಂಗಳಾ ಚಂದ್ರಕಾಂತ್, ಪದ್ಮಜಾ, ರಾಜೇಶ್ ಪ್ರಭು, ಪ್ರೀತೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಯಾನದ ಮಾಹಿತಿ ವಿವರಣೆ, ನೃತ್ಯ, ಆಶುಭಾಷಣ, ರಸಪ್ರಶ್ನೆಗಳ ಮೂಲಕ ಮಣ್ಣು ಉಳಿಸಿ ಅಭಿಯಾನದ ಅರಿವು ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ರವಿ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.