ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಾದ ಮಳೆ, ಪ್ರವಾಹ, ವಾಯುಬಾರ ಕುಸಿತ, ಭೂಕಂಪ, ನೆರೆಹಾವಳಿ, ಕಟ್ಟಡ ಕುಸಿತ ಇತ್ಯಾದಿಗಳಿಂದಾಗುವ ಅನಾಹುತಗಳ ಬಗ್ಗೆ ಮುಂಜಾಗೃತಾ ಕ್ರಮ ಹಾಗೂ ರಕ್ಷಣಾ ಕೆಲಸಗಳನ್ನು ನಿರ್ವಹಿಸಲು ಮತ್ತು ಈ ಸಂದರ್ಭದಲ್ಲಿ ತುರ್ತು ಸ್ಥಳಕ್ಕೆ ಹೋಗಬೇಕಾಗಿರುವ ಕಂದಾಯ ಇಲಾಖೆಯ ಎಲ್ಲಾ 7 ತಾಲೂಕು ತಹಶೀಲ್ದಾರರಿಗೆ, ರಾಜಸ್ವ ನಿರೀಕ್ಷಕರು, ಗ್ರಾಮ ಮಟ್ಟದ ಗ್ರಾಮ ಕರಣಿಕರು ಹಾಗೂ ಗ್ರಾಮ ಸಹಾಯಕರುಗಳಿಗೆ ಅತೀ ಅವಶ್ಯಕತೆ ಇರುವ ಉತ್ತಮ ಗುಣಮಟ್ಟದ ಒಟ್ಟು 315 ರೈನ್ ಕೋಟ್, ಟಾರ್ಚ್ಗಳಂತಹ ತುರ್ತು ಅವಶ್ಯಕ ರಕ್ಷಣಾ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ವಿತರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಉಪಸ್ಥಿತರಿದ್ದರು.