ಉದ್ಯಾವರ ರೋಟರಿ ಕ್ಲಬ್ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು. ಮಾಜಿ ಸಹಾಯಕ ಗವರ್ನರ್ ಡಾ. ಎ ಗಣೇಶ್ ಅವರು ನೂತನ ಅಧ್ಯಕ್ಷ ನಾಗೇಶ್ ಸಿ.ಹೆಚ್. ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಉದ್ಯಾವರ ಆಸುಪಾಸಿನಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡ, ಕೋವಿಡ್ ಸಂದಿಗ್ಧತೆಯ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಧೈರ್ಯತುಂಬಿ ಶವ ಸಂಸ್ಕಾರಕ್ಕೆ ತಾನೇ ಮುತುವರ್ಜಿ ವಹಿಸುತ್ತಿರವ, ಸಾರ್ವಜನಿಕ ಹಿಂದೂ ರುದ್ರಭೂಮಿ ಉದ್ಯಾವರ ಇದರ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಗಿರೀಶ್ ಕುಮಾರ್ ಉದ್ಯಾವರ ಅವರ ಸೇವೆಗಾಗಿ ಸನ್ಮಾನಿಸಲಾಯಿತು.
ರೋಟರಿ ಸಹಾಯಕ ಗವರ್ನರ್ ಡಾ. ಕೆ. ಸುರೇಶ್ ಶಣೈ ರೋಟರಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಲಯ ಸೇನಾನಿ ಉಮೇಶ್ ರಾವ್ ಹಾಗೂ ರೋಟರಿಯ ಆನಂದ್ ಉದ್ಯಾವರ್, ಗುರುಪ್ರಸಾದ್ ಕಾಮತ್, ವಸಂತ ಕೋಟ್ಯಾನ್ ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ದೀಕ್ಷಿತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಸತೀಶ್ ವಂದಿಸಿದರು. ರಾಜೇಶ್ ಪಾಲನ್, ಗಿರಿರಾಜ್ ನಿರೂಪಿಸಿದರು.