ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಬಹಳವಾಗಿ ಕಂಡುಬರುತ್ತಿದೆ. ಖಿನ್ನತೆ, ಸಾಲಬಾಧೆ, ಕುಟುಂಬ ಕಲಹ, ಪ್ರೇಮ ವೈಫಲ್ಯ, ನಿರುದ್ಯೋಗ ಸಮಸ್ಯೆ, ಜೀವನದಲ್ಲಿ ಜಿಗುಪ್ಸೆ, ಅಸಹಾಯಕತೆ ಮೊದಲಾದ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಕಂಡುಬರುತ್ತಿದೆ.
ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿರುವುದು ಕಂಡುಬರುತ್ತಿದೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಹದಿ ಹರೆಯದವರು, ನಡು ವಯಸ್ಸಿನವರು, ಹಿರಿಯ ನಾಗರಿಕರು, ವಿದ್ಯಾವಂತರು, ಅಧಿಕಾರಿ ವರ್ಗದವರು ಇರುವುದು ಕಂಡುಬರುತ್ತಿದೆ. ದಿನ ದಿನವು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡಾಗ ಉಡುಪಿ ಜಿಲ್ಲೆ ಆತ್ಮಹತ್ಯೆ ಮಾಡುಕೊಳ್ಳುವವರ ಜಿಲ್ಲೆ ಆಗುತ್ತದೆಯೇ ಎಂಬ ಆತಂಕವು ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳಿಂದ ವಾರ್ಷಿಕ ಆತ್ಮಹತ್ಯೆ ಪ್ರಕರಣಗಳ ವರದಿ ಪಡೆದರೆ, ಆತಂಕದ ವಿಚಾರ ತಿಳಿಯಬಹುದು. ಈ ಬಗ್ಗೆ ಜಿಲ್ಲಾಡಳಿತ- ಪೋಲಿಸ್ ಇಲಾಖೆಯು ತಜ್ಞ ಮನೋವೈದ್ಯರ ನೆರವು ಪಡೆದು, ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನೆಲೆಯಲ್ಲಿ ಜಾಗ್ರತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಈ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಘಟಿಸುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕಂಡು ಆತಂಕ ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಸಲಹೆ ನೀಡಿದ್ದಾರೆ.