Saturday, September 21, 2024
Saturday, September 21, 2024

ಉ.ಕ. ಕಾರ್ಮಿಕರ ಬೆರಳಚ್ಚು ಬವಣೆ ತಪ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

ಉ.ಕ. ಕಾರ್ಮಿಕರ ಬೆರಳಚ್ಚು ಬವಣೆ ತಪ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Date:

ಉಡುಪಿ: ಪಡಿತರ ಚೀಟಿ ನವೀಕರಣಕ್ಕೆ ಬೆರಳಚ್ಚು ಪಡೆಯುವ ಸಲುವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಾದ್ಯಂತ ವಾಸಿಸುತ್ತಿರುವ ಉತ್ತರ ಕರ್ನಾಟಕದ ಕಾರ್ಮಿಕರಿಗೆ ಪ್ರತಿಯೊಬ್ಬರಿಗೂ ಅವರವರ ಊರುಗಳಿಂದ ಕರೆ ಬರುತ್ತಿದ್ದು ಬೆರಳಚ್ಚು ನೀಡಲು ತಮ್ಮ ತಮ್ಮ ಊರುಗಳಿಗೆ ಹೋಗಿ ಬರಲು ತುಂಬಾ ತೊಂದರೆಯಾಗುತ್ತಿದೆ.

ಈ ವಿಷಯವನ್ನು ಮನಗಂಡು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇವರು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ರವರಿಗೆ ಮನವಿ ಸಲ್ಲಿಸಿ ಕಾರ್ಮಿಕರಿಗೆ ಆಗುತ್ತಿರುವ ಸಂಕಷ್ಟಗಳನ್ನು ನಿವಾರಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಬಸವರಾಜ್ ಐಹೊಳೆ, ಕುಮಾರ್ ಪ್ರಸಾದ್, ಸಿದ್ದಪ್ಪ ಪೂಜಾರಿ, ಮಹೇಶ್ ಗುಂಡಿಬೈಲು, ಸವಿತಾ ನೋಟಗಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸ್ವಚ್ಛತೆ ನಮ್ಮೆಲ್ಲರ ಮೊದಲ ಆದ್ಯತೆಯಾಗಲಿ

ಉಡುಪಿ, ಸೆ.21: ಕಡಲ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜಲಚರಗಳ ಅಸ್ತಿತ್ವಕ್ಕೆ ತೊಂದರೆಯಾಗುತ್ತಿದೆ....

ಯುವಜನತೆ ಉತ್ತಮ ಭವಿಷ್ಯದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು: ಜಿಲ್ಲಾಧಿಕಾರಿ

ಉಡುಪಿ, ಸೆ.21: ಯುವಜನತೆ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೇ, ಶೈಕ್ಷಣಿಕ...

ವಿಶ್ವಕರ್ಮ ಯೋಜನೆಯ ಲಾಭ ಪಡೆದು ಕುಶಲಕರ್ಮಿಗಳು ಉದ್ಯಮಿಗಳಾಗಬಹುದು: ಪ್ರಧಾನಿ ನರೇಂದ್ರ ಮೋದಿ

ವಾರ್ಧಾ, ಸೆ.21: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು...

ಭ್ರಷ್ಟಾಚಾರ ಪ್ರಕರಣ: ಲಾಲು ಪ್ರಸಾದ್ ಯಾದವ್ಗೆ ಸಿಬಿಐ ಬಿಸಿ

ನವದೆಹಲಿ, ಸೆ.21: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಮಾಜಿ...
error: Content is protected !!