Sunday, January 19, 2025
Sunday, January 19, 2025

ವೈ ಕೆ ಮುದ್ದುಕೃಷ್ಣ ಅವರ ಕೃತಿ ಬಿಡುಗಡೆ

ವೈ ಕೆ ಮುದ್ದುಕೃಷ್ಣ ಅವರ ಕೃತಿ ಬಿಡುಗಡೆ

Date:

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಹಾಗೂ ರಂಗಸಂಗಾತಿ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಹಾಗೂ ಕನ್ನಡ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ ಕೆ ಮುದ್ದುಕೃಷ್ಣ ಅವರ ಆತ್ಮಕಥನ ‘ಹಾಡು ಹಿಡಿದ ಜಾಡು’ ಕೃತಿ ಅನಾವರಣವು ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಲೋಕಾರ್ಪಣೆಗೊಂಡಿತು.

ಜಾಹೀರಾತು / Click on the image to apply

ಕೃತಿಯನ್ನು ಚಲನಚಿತ್ರ ನಿರ್ದೇಶಕ ಹಾಗೂ ರಂಗನಿರ್ದೇಶಕ ಕಾಸರಗೋಡು ಚಿನ್ನಾ ಬಿಡುಗಡೆ ಮಾಡಿ, ಒಬ್ಬ ವ್ಯಕ್ತಿಯ ಜೀವನ ಶೈಲಿ ಸಮಾಜಮುಖಿಯಾಗಿದ್ದು ಆತನ ವ್ಯಕ್ತಿತ್ವ ಇತರರಿಗೆ ಸ್ಫೂರ್ತಿಯಾಗಿ ಆತ ಜನಸಾಮಾನ್ಯರಿಗೆ ಹತ್ತಿರವಾದಾಗ ಅಂತವರ ಜೀವನ ಕಥನವನ್ನು ದಾಖಲೀಕರಿಸಿ ಹೊತ್ತಿಗೆಯ ರೂಪದಲ್ಲಿ ಹೊರತಂದರೆ ಅದು ನಮ್ಮ ಮುಂದಿನ ಯುವ ಜನಾಂಗಕ್ಕೆ ದಾರಿದೀಪವಾಗುವುದು.

ಈ ನಿಟ್ಟಿನಲ್ಲಿ ವೈ ಕೆ ಮುದ್ದುಕೃಷ್ಣರವರ ಅಪರೂಪದ ಅನುಕರಣೀಯ ಆದರ್ಶ ಜೀವನಗಾಥೆಯನ್ನು ಖ್ಯಾತ ಸಾಹಿತಿ ನಾ. ದಾಮೋದರ ಶೆಟ್ಟಿಯವರ ಮೂಲಕ ಹಾಡು ಹಿಡಿದ ಜಾಡು ಎಂಬ ಕೃತಿ ಹೊರಬಂದಿರುವುದು ಶ್ಲ್ಯಾಘನೀಯ ಎಂದರು.

ಕೃತಿಕರ್ತ ಡಾ| ನಾ. ದಾಮೋದರ್ ಶೆಟ್ಟಿ ಕೃತಿ ಪರಿಚಯಿಸಿದರು.

ನಾಟಕಕಾರ ಶಶಿರಾಜ್ ಕಾವೂರು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದರ ವ್ಯವಸ್ಥಾಪಕ ಹಫೀಜ್ ರೆಹಮಾನ್, ರಾಘವೇಂದ್ರ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ರಾಜೇಶ್ ಭಟ್ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲ್ ಉಪಸ್ಥಿತರಿದ್ದರು.

ರಂಜನಿ ವಸಂತ್ ಪ್ರಾರ್ಥಿಸಿದರು. ವಾಸಂತಿ ಅಂಬಲಪಾಡಿ ಸ್ವಾಗತಿಸಿದರು. ಜನಾರ್ದನ್ ಕೊಡವೂರು ಧನ್ಯವಾದವಿತ್ತರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವೈ ಕೆ ಮುದ್ದುಕೃಷ್ಣ ಅವರಿಂದ ಭಾವಗೀತೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!