ಕಲ್ಯಾಣಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಗೊರೆಟ್ಟಿ ಆಸ್ಪತ್ರೆ, ಕಲ್ಯಾಣಪುರ ಇವರ ಜಂಟಿ ಆಶ್ರಯದಲ್ಲಿ “ಪ್ರೌಢಾವಸ್ಥೆ ಮತ್ತು ಆರೋಗ್ಯ” ಮಾಹಿತಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಳಾರ್ಕಳಬೆಟ್ಟು, ನೇಜಾರು ಇಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಗೊರೆಟ್ಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಜಲಕ್ಷ್ಮೀ ಪ್ರೌಢಾವಸ್ಥೆ ಕುರಿತಾಗಿ ಮಾಹಿತಿ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಶಿಕ್ಷಕಿ ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು.
ಗೊರೆಟ್ಟಿ ಆಸ್ಪತ್ರೆಯ ಸಮಾಜಕಾರ್ಯ ವಿಭಾಗದ ಸಂಯೋಜಕ ರಾಕೇಶ್ ಉಪಸ್ಥಿತರಿದ್ದರು. ಮೆಲಿಟಾ ಡಿ’ಅಲ್ಮೇಡಾ ಸ್ವಾಗತಿಸಿ, ಶಿವಾನಿ ಸನಿಲ್ ವಂದಿಸಿದರು. ಐಶ್ವರ್ಯ ನಿರೂಪಿಸಿದರು.