Wednesday, February 26, 2025
Wednesday, February 26, 2025

ಗುರು ಶಿಷ್ಯರ ಸಮನ್ವಯತೆಯೇ ಶಿಕ್ಷಣ: ಪ್ರೊ ಕೆ.ವಿ.ರಾವ್

ಗುರು ಶಿಷ್ಯರ ಸಮನ್ವಯತೆಯೇ ಶಿಕ್ಷಣ: ಪ್ರೊ ಕೆ.ವಿ.ರಾವ್

Date:

ಮಣಿಪಾಲ: ಮಕ್ಕಳೊಂದಿಗೆ ಮಗುವಾಗಿ, ಮಿತ್ರನಾಗಿ, ಸಮಾನನಾಗಿ, ಸಮನ್ವಯಕಾರನಾಗಿ, ಸಮಸ್ಯೆಗಳ ಪರಿಹಾರಕನಾಗಿ ಗುರು ದುಡಿದರೆ ತನ್ನ ಶಿಷ್ಯನಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸಬಹುದು.

ಗುರುತ್ವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಸ್ಥಾನ. ಪ್ರಪಂಚದ ಆಗುಹೋಗುಗಳ ಸ್ಪಷ್ಟೀಕರಣ ಕೊಡುವ, ಸತ್ಯವನ್ನು ಹುಡುಕುವ ಪ್ರಯತ್ನ ಮತ್ತು ಉತ್ಸಾಹವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಆತನ ಆದ್ಯ ಕರ್ತವ್ಯ.

ಅಸಾಧ್ಯವಾದುದರ ಸಾಧಿಸುವ ಛಲವು ಬೆಳವಣಿಗೆಗೆ ಮಾರಕವಾಗಬಹುದು. ಸಾಧ್ಯವಿರುವ ಗುರಿಯಡೆಗೆ ಸ್ಪಷ್ಟತೆ ಮತ್ತು ಸಿದ್ಧತೆ ಮಾಡಿಕೊಡುವ ಕೌಶಲ್ಯ ಗುರುವಿಗಿರಬೇಕಾಗುತ್ತದೆ ಎಂದು ಕಂಪ್ಯೂಟರ್ ವಿಜ್ಞಾನಿ ಫ್ರೊ. ಕೆ.ವಿ.ರಾವ್ ಹೇಳಿದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಇದರಿಂದ ನಡೆದ ಗುರುಪೂರ್ಣಿಮಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾವಿರಾರು ಜ್ಞಾನದಾಹಿಗಳಿಗೆ ಗುರುವಾಗಿ, ಗಣಕಯಂತ್ರದ ಭಾರತೀಯ ಭಾಷೆಗಳ ಕೀಲೀಮಣೆಯ ಪಿತಾಮಹನೆಂದು ಕರೆಯಲ್ಪಡುವ ಫ್ರೊ. ಕೆ.ವಿ.ರಾವ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನಿತ್ಯಾನಂದ ನಾಯಕ್ ಅವರು ವಹಿಸಿದ್ದರು.

ಸಚ್ಚಿದಾನಂದ ವಿ. ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಮಣಿಪಾಲ ಹಿಲ್ಸ್ ರೋಟರಿ ಅಧ್ಯಕ್ಷೆ ಸವಿತಾ ಭಟ್ ಉಪಸ್ಥಿತರಿದ್ದರು. ದೀಪಕರಾಮ್ ಬಾಯರಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!