ಕುಂದಾಪುರ: ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕುಂದಾಪುರ ವತಿಯಿಂದ ವೈದ್ಯರ ದಿನಾಚರಣೆಯನ್ನು ಕುಂದಾಪುರದ ಹೋಟೆಲ್ ಶರೊನ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕುಂದಾಪುರ ಎ.ಎಫ್.ಐ ಅಧ್ಯಕ್ಷ ಡಾ. ರವೀಂದ್ರ ತಲ್ಲೂರು ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಎ.ಎಫ್.ಐ ಜಿಲ್ಲಾಧ್ಯಕ್ಷ ಡಾ. ಎನ್.ಟಿ. ಅಂಚನ್ ಪಡುಬಿದ್ರಿ ಅವರು ವೈದ್ಯರ ದಿನಾಚರಣೆಯ ಮಹತ್ವ, ಸಮಾಜಕ್ಕೆ ವೈದ್ಯರ ಕೊಡುಗೆಗಳನ್ನು ವಿಸ್ತ್ರತವಾಗಿ ವಿವರಿಸಿದರು.
ಹಳ್ಳಿ ಪ್ರದೇಶವಾದ ಆರ್ಡಿ, ಗೋಳಿಯಂಗಡಿ ಭಾಗದಲ್ಲಿ ಕಳೆದ 51ವರ್ಷಗಳಿಂದ ಕನಿಷ್ಠ ಶುಲ್ಕ, ಗರಿಷ್ಠ ಸೇವೆಯಿಂದ ಮನೆಮಾತಾಗಿರುವ ಡಾ. ಪರಮೇಶ್ವರ್ ಉಡುಪ ಗೋಳಿಯಂಗಡಿ, ಕುಂದಾಪುರ ದೇವಿ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ ಖ್ಯಾತ ಫಿಸಿಷಿಯನ್ ಡಾ. ಮಾನಂಜೆ ರವೀಂದ್ರ ರಾವ್ ಮತ್ತು ಕುಂದಾಪುರ ತಾಲೂಕಿನಲ್ಲಿ ಮನೆಮಾತಾಗಿರುವ ಸುಮಾರು 50,000ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿರುವ ಖ್ಯಾತ ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ ಡಾ. ಭವಾನಿ ರವೀಂದ್ರ ರಾವ್ ರವರನ್ನು ಸನ್ಮಾನಿಸಲಾಯಿತು.
ಡಾ. ಸಬಿತಾ ಆಚಾರ್ಯ, ಡಾ. ಜೆ.ಕೆ ಶೆಟ್ಟಿ ಗೋಳಿಯಂಗಡಿ, ಡಾ. ಪೌರವ ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ ನಾಗೂರು, ಡಾ. ವಿಜಯಲಕ್ಷ್ಮೀ ಸಹಕರಿಸಿದರು.
ಜಿಲ್ಲಾ ಕಾರ್ಯದರ್ಶಿ ಡಾ. ಸತೀಶ್ ರಾವ್, ಉಡುಪಿ ತಾಲೂಕಿನ ಕಾರ್ಯದರ್ಶಿ ಡಾ. ಸಂದೀಪ್ ಸನಿಲ್ ಉಪಸ್ಥಿತರಿದ್ದರು.
ಡಾ. ಸೋನಿ ಡಿ ಕೋಸ್ಟ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಅರುಣ್ ಶೆಟ್ಟಿ ಇವರಿಂದ ಸ್ಪೋರಿಯಾಸಿಸ್ ನಿರ್ವಹಣೆ ಬಗ್ಗೆ ಸಿ.ಎಂ.ಇ ಕಾರ್ಯಕ್ರಮ ನಡೆಯಿತು.
ಎ.ಎಫ್.ಐ ಕುಂದಾಪುರ ಕಾರ್ಯದರ್ಶಿ ಡಾ. ರಾಜೇಶ್ ಶೆಟ್ಟಿ ವಂದಿಸಿದರು.