ಉಡುಪಿ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
2021-22ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 620ಕ್ಕೂ ಅಧಿಕ ಅಂಕ ಪಡೆದ ಅನ್ವಿತಾ ಎಸ್ (624), ಅನಿರುದ್ಧ ಎಸ್. ಹತ್ವಾರ್ (624), ಅಭಿಷೇಕ್ ಅಡಿಗ (623), ಆದಿತ್ಯ ಎಮ್ (623), ಛಾಯಾ (622), ಸಿಂಧು ಕೆ. ಟಿ (622), ರಿಯಾ ಎಚ್. ಶೆಟ್ಟಿ(622), ಎಮ್. ಸೃಜನ್ (621), ಬಿ. ಸುನಿಧಿ ಉಡುಪ (621), ಅರ್ಪಿತಾ ಎನ್ (620), ಹರ್ಷಿತ ಡಿ. ಎಸ್ (620), ಶಾನ್ವಿನ್ ರೋಯ್ಸ್ ಪಿರೇರಾ(620) ಇವರನ್ನು ಸಂಸ್ಥೆಯ ಸಂಚಾಲಕರಾದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಒಳ್ಳೆಯ ಶೈಕ್ಷಣಿಕ ವಾತಾವರಣ ಜೊತೆಗೆ ಗುರಿಯ ಹಿಂದೆ ಗುರುವಿನ ಮಾರ್ಗದರ್ಶನದಿಂದ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಇಂತಹ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದರು.
ಸಾಧಕ ವಿದ್ಯಾರ್ಥಿಗಳು ತಮ್ಮ ಸಾಧನೆಯ ಪಥದ ವಿವಿಧ ಮಜಲುಗಳನ್ನು ಹಂಚಿಕೊಂಡರು. ಸಾಧನೆಯ ಹಿಂದಿನ ರೂವಾರಿಗಳಾದ ಶಿಕ್ಷಕರನ್ನೂ ಸಂಸ್ಥೆಯ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.
ಪ್ರಾಂಶುಪಾಲರಾದ ಚಿಂತನಾ ರಾಜೇಶ್, ಮುಖ್ಯ ಶಿಕ್ಷಕಿ ಮತ್ತು ಉಪಪ್ರಾಂಶುಪಾಲರಾದ ಶುಭಾ ಕೆ. ಎನ್., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲತಾ ಜಿ.
ಭಟ್ ಉಪಸ್ಥಿತರಿದ್ದರು.
ಪ್ರೌಢ ಶಾಲಾ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.