ಮಣಿಪಾಲ: ಸರಕಾರಿ ಪಾಲಿಟೆಕ್ನಿಕ್ ಅನಂತನಗರ ಮಣಿಪಾಲ ಇದರ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್, ರೋಟರಿ ಉಡುಪಿ ಮತ್ತು ಬ್ಲಡ್ ಬ್ಯಾಂಕ್ ಕೆಎಂಸಿ ಮಣಿಪಾಲ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ರೋಟರಿ ಉಡುಪಿಯ ಹ್ಯಾಪಿ ಸ್ಕೂಲ್ ಯೋಜನೆಯಂತೆ ಪಾಲಿಟೆಕ್ನಿಕ್ ನ ಕಂಪ್ಯೂಟರ್ ವಿಭಾಗಕ್ಕೆ ನೀಡಲಾದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಮೌಲ್ಯದ ಕಂಪ್ಯೂಟರ್ ಟೇಬಲ್ ನ ಹಸ್ತಾಂತರ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು.
ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರಾಜರಾಮ ಭಟ್, ಹ್ಯಾಪಿ ಸ್ಕೂಲ್ ನ ಜಿಲ್ಲಾ ಸಭಾಪತಿ ಕರುಣಾಕರ ಶೆಟ್ಟಿ, ಸಹಾಯಕ ಗವರ್ನರ್ ಡಾ. ಸುರೇಶ್ ಶೆಣೈ, ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಯು. ಕಾಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಸಮುದಾಯ ಸೇವಾ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಬ್ಲಡ್ ಬ್ಯಾಂಕ್ ನ ಡಾ. ದೀಪಿಕಾ ಹಾಗೂ ಡಾ. ಅಶ್ನಾ, ಪಾಲಿಟೆಕ್ನಿಕ್ ನಪ್ರಭಾರ ಪ್ರಾಂಶುಪಾಲ ಪುಷ್ಪ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಶಶಿಕುಮಾರ್ ಉಪಸ್ಥಿತರಿದ್ದರು.
ಉಪನ್ಯಾಸಕ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಅಧ್ಯಕ್ಷ ಹೇಮಂತ ಯು ಕಾಂತ ಸ್ವಾಗತಿಸಿ, ಉಪನ್ಯಾಸಕ ಸುನಿಲ್ ಕುಮಾರ್ ವಂದಿಸಿದರು. ಉಪನ್ಯಾಸಕಿ ವಂದನಾ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 50 ಯೂನಿಟ್ ರಕ್ತ ಸಂಗ್ರಹವಾಯಿತು.