ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಹಲವಾರು ರ‍್ಯಾಂಕ್ ಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಭವ್ಯ ನಾಯಕ್ (597) ದ್ವಿತೀಯ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ನೀತಾ ಕೆ ರಾವ್ (593), ಸುಹಾಸ್ ಶೆಣೈ (593) ಆರನೇ ರ‍್ಯಾಂಕ್, ಶ್ರೇಯಾ ಆರ್ ಶೆಟ್ಟಿ (592), ಮೋಹನ್ ಎಸ್ ಆರ್ (592) ಏಳನೇ ರ‍್ಯಾಂಕ್, ವೃದ್ಧಿ ಶೆಟ್ಟಿ (590), ಗಜಾನನ ನಾಯಕ್ (590) ಒಂಭತ್ತನೇ ರ‍್ಯಾಂಕ್, ನಂದನ್ ಉಪಾಧ್ಯಾಯ (589), ಸ್ವಾತಿ ಆರ್ ಕಿಣಿ (589), ವೈಷ್ಣವಿ ಆರ್ ಮೊಹರೆರ್ (589) ಹತ್ತನೇ ರ‍್ಯಾಂಕ್ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಛಾಯಾ (592), ಆಕಾಶ್ ಶೇಟ್ (592) ಐದನೇ ರ‍್ಯಾಂಕ್, ಸ್ವಾತಿ ಕಾಮತ್ (590), ವಿರಾಜ್ ವಿ ಶೆಟ್ಟಿ (590) ಏಳನೇ ರ‍್ಯಾಂಕ್, ಶ್ರೇಯಾ ಎಂ ಬಲ್ಲಾಳ್ (589), ಶ್ರೀರಕ್ಷಾ ಎಂ ಎಸ್ (589), ಪ್ರಾರ್ಥನಾ ಎಮ್ ನಾಯಕ್ (589), ಅನನ್ಯ (587) ಎಂಟನೇ ರ‍್ಯಾಂಕ್, ಶ್ರೇಯಾ ವಿ ಕುಂದರ್ (588), ಭೂಮಿಕಾ ಜೆ ವಿ (588), ಸ್ವಪ್ನ ಕೆ ಎಚ್ (588) ಒಂಭತ್ತನೇ ರ‍್ಯಾಂಕ್, ಐಶ್ವರ್ಯ ಎಸ್ (587), ಕ್ರಿಸಾನ್ ಮೋನಿಸ್ (587) ಹತ್ತನೇ ರ‍್ಯಾಂಕ್ ಪಡೆದಿರುತ್ತಾರೆ.
ಒಟ್ಟು ವಿಜ್ಞಾನ ವಿಭಾಗದಲ್ಲಿ 312 ವಿದ್ಯಾರ್ಥಿಗಳಲ್ಲಿ 207 ಮಂದಿ, ವಾಣಿಜ್ಯ ವಿಭಾಗದಲ್ಲಿ 271 ವಿದ್ಯಾರ್ಥಿಗಳಲ್ಲಿ 155 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕಾರ್ಯದರ್ಶಿ ಡಾ.ಶಶಿಕಿರಣ್ ಉಮಾಕಾಂತ್, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.