Monday, September 23, 2024
Monday, September 23, 2024

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ: ಆಲ್ವಿನ್ ಆಂದ್ರಾದೆ

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ: ಆಲ್ವಿನ್ ಆಂದ್ರಾದೆ

Date:

ಉದ್ಯಾವರ: ವಿದ್ಯಾರ್ಥಿಗಳ ಓದು ತಮ್ಮ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳು ನಿಮ್ಮನ್ನು ವಿದ್ಯಾವಂತರನ್ನಾಗಿಸಿದರೆ, ಇತರ ಪುಸ್ತಕಗಳು ಜ್ಞಾನವಂತರನ್ನಾಗಿಸುತ್ತದೆ. ಇಂದಿನ ಸ್ಪರ್ಧಾಯುಗದಲ್ಲಿ ವಿದ್ಯಾವಂತರಾಗುವ ಜೊತೆಗೆ ಜ್ಞಾನವಂತರೂ ಆಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ.

ಹಾಗಾಗಿ ಪಠ್ಯ ಪುಸ್ತಕದ ಜತೆ ಜತೆಗೆ ಇತರ ಪುಸ್ತಕಗಳನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಅದು ನಿಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಶಿವಮೊಗ್ಗ ಸಾಗರ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಆಲ್ವಿನ್ ಆಂದ್ರಾದೆ ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಯು.ಎಫ್.ಸಿ ಪುಸ್ತಕ ಭಂಡಾರದಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನೆ ಮರೆಯುತ್ತಿದ್ದಾರೆ. ನಾವು ಒಂದು ವಿಷಯದ ಬಗ್ಗೆ ಪ್ರಶ್ನಿಸದಿದ್ದರೆ ಆ ವಿಷಯದಲ್ಲಿ ಪರಿಣಿತಿಯನ್ನು ಸಾಧಿಸಲು ಸಾಧ್ಯವಿಲ್ಲ. ಯಾವುದೇ ವಿಷಯವಾಗಿರಲಿ ಅದನ್ನು ಶಿಕ್ಷಕರಾಗಲಿ, ಹೆತ್ತವರಾಗಲಿ ಹೇಳಿದಾಗ ಅದರ ಎಲ್ಲಾ ಆಯಾಮಗಳನ್ನು ತಿಳಿದುಕೊಂಡು ಮತ್ತೆ ಒಪ್ಪಿಕೊಳ್ಳಬೇಕು. ಇಂತಹ ಅಭ್ಯಾಸ ಬೆಳೆಯಬೇಕಾದರೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಇಂದು ಯುಎಫ್ಸಿ ಪುಸ್ತಕ ಭಂಡಾರದಿಂದ ಪಠ್ಯ ಪುಸ್ತಕಗಳನ್ನು ಪಡೆದುಕೊಂಡು ತಮ್ಮ ವಿದ್ಯಾಭ್ಯಾಸಕ್ಕೆ ಬಳಸುವ ವಿದ್ಯಾರ್ಥಿಗಳು ಈ ಋಣವನ್ನು ಉಳಿಸಕೊಳ್ಳ ಬಾರದು. ತಾವು ತಮ್ಮ ಓದು ಮುಗಿಸಿ ಆರ್ಥಿಕವಾಗಿ ಸ್ಥಿರರಾದಾಗ ನೀವು ನಿಮ್ಮ ಮುಂದಿರುವ ಅರ್ಹ ವಿದ್ಯಾರ್ಥಿಗಳಿಗೆ ನಿಮ್ಮಿಂದಾದ ಸಹಾಯವನ್ನು ಮಾಡಿದಾಗ ಉದ್ಯಾವರ ಫ್ರೆಂಡ್ಸ್ ಸರ್ಕಲಿನ ಈ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಈ ಪಠ್ಯ ಪುಸ್ತಕಗಳನ್ನು ಬಳಸಿಕೊಂಡು ತಾವು ಜೀವನದಲ್ಲಿ ಯಶಸ್ವಿಯಾಗಿರಿ. ನಿಮ್ಮ ಮುಂದಿನ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿರಿ ಎಂದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಸಂಸ್ಥೆ ನಿರಂತರವಾಗಿ ವಿದ್ಯಾ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದೆ. ಇಂದು ಪುಸ್ತಕ ಭಂಡಾರದಿಂದ ಪುಸ್ತಕವನ್ನು ಪಡೆದ ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿ. ಅದರೊಂದಿಗೆ ಪುಸ್ತಕಗಳನ್ನು ಪ್ರೀತಿಸಿ. ಆ ಪುಸ್ತಕಗಳಿಗೆ ಮುಂದಿನ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ನಿಮ್ಮ ಕಲಿಕೆ ಮುಗಿದ ಕೂಡಲೆ ಬುಕ್ ಬ್ಯಾಂಕ್ಗೆ ಹಿಂತಿರುಗಿಸಿ ಎಂದರು.

ಇಂದಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗುತ್ತಿದೆ. ಇದರಿಂದ ವಿದ್ಯಾರ್ಥಿ ಸಮುದಾಯ ದಾರಿ ತಪ್ಪುವ ಅಪಾಯವಿದೆ. ಮೊಬೈಲ್ ಬಳಕೆಗೆ ಮಿತಿಯನ್ನು ಹಾಕಿ ಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂಗತಿಗಳು ಜ್ಙಾನದ ಮೂಲ ಎಂಬ ಭ್ರಮೆಯಿಂದ ಹೊರಬಂದು ವಾಸ್ತವವನ್ನು ಅರಿತು ವರ್ತಿಸಬೇಕು. ಹಾಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ‌ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಂಸ್ಥೆಯ ನಿರ್ದೇಶಕರಾದ ಶರತ್ ಕುಮಾರ್ ಅವರು ಪಠ್ಯ ಪುಸ್ತಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿ ಆರ್ಥಿಕ ಕಾರಣದಿಂದ ಉನ್ನತ ಶಿಕ್ಷಣ ಮುಂದುವರಿಸಲು ಅಸಾಧ್ಯವಾದ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಲು ನಾನು ಬದ್ದನಾಗಿದ್ದೇನೆ ಎಂದರು.

ಸಂಸ್ಥೆ ಅಧ್ಯಕ್ಷರಾದ ರಿಯಾಝ್ ಪಳ್ಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಮಾಜಿ ಅಧ್ಯಕ್ಷರಾದ ರಮೇಶ್ ಕುಮಾರ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಸುಮಾರು 150 ವಿದ್ಯಾರ್ಥಿಗಳು ಬುಕ್ ಬ್ಯಾಂಕ್ ಸೌಲಭ್ಯ ಪಡೆದುಕೊಂಡರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಾಗತಿಕ ಬೆಳವಣಿಗೆ, ಶಾಂತಿ ಮತ್ತು ಭದ್ರತೆ ಮುಖ್ಯ: ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಯು.ಬಿ.ಎನ್.ಡಿ., ಸೆ.23: ಯುಎಸ್‌ನ ಡೆಲವೇರ್‌ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಜಾಗತಿಕ...

ಭಾಷಣ ಸ್ಪರ್ಧೆ

ನಿಟ್ಟೆ, ಸೆ.23: ರೋಟರಿ ಕ್ಲಬ್ ನಿಟ್ಟೆ ವತಿಯಿಂದ ಸಾಕ್ಷರತಾ ಸಪ್ತಾಹದ ಅಂಗವಾಗಿ...

ಸಮ್ಮೇಳನದ ಪೂರ್ವಭಾವಿ ಸಭೆ

ಕಾಪು, ಸೆ.23: ಬಿಜೆಪಿ ಒಬಿಸಿ ಮೋರ್ಚಾ ಉಡುಪಿ ಜಿಲ್ಲೆ ವತಿಯಿಂದ ಸೆಪ್ಟೆಂಬರ್...

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...
error: Content is protected !!