ಉಡುಪಿ: ಸಂತ ಮೇರಿ ಕಾಲೇಜು ಶಿರ್ವ ಇದರ ರೋವರ್ಸ್ – ರೇಂಜರ್ಸ್ ಘಟಕದ ವತಿಯಿಂದ ಕಾಲೇಜಿನ ರೋವರ್ಸ್ – ರೇಂಜರ್ಸ್ ಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಸುಮನ ಶೇಖರ್ ಆಗಮಿಸಿ, ಕಾಲೇಜಿನಲ್ಲಿ ರೋವರ್ಸ್ – ರೇಂಜರ್ಸ್ ಮಹತ್ವ ಹಾಗೂ ರೋವರ್ಸ್ – ರೇಂಜರ್ಸ್ ಗಳಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬೇಕಾದ ಮಾರ್ಗದರ್ಶನ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿತೇಶ್ ಕಾಂಚನ್, ರೋವರ್ಸ್ – ರೇಂಜರ್ಸ್ ವಿವಿಧ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಮಾಹಿತಿಯನ್ನು ನೀಡಿ, ನಿಪುಣ್, ರಾಜ್ಯ ಪುರಸ್ಕಾರ ಹಾಗೂ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆಯಲು ಅಗತ್ಯವಾದ ವಿಷಯಗಳ ಬಗ್ಗೆ ಮಾತನಾಡಿದರು.
ಶಿಬಿರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಮೋನಿಸ್ ವಹಿಸಿ ಮಾತನಾಡಿದರು. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಪ್ರಕಾಶ್ ಶಿಬಿರವನ್ನು ಆಯೋಜಿಸಿದರು.
ರೇಂಜರ್ ಲೀಡರ್ ಸಂಗೀತಾ, ರೋವರ್ ನಾಯಕ ಡ್ಯಾರಿಲ್, ರೇಂಜರ್ ನಾಯಕಿ ರಾಫಿದ ಹಾಗೂ ಕಾಲೇಜಿನ ಎಲ್ಲಾ ರೋವರ್ಸ್ – ರೇಂಜರ್ಸ್ ಶಿಬಿರದಲ್ಲಿ ಉಪಸ್ಥಿತರಿದ್ದರು.