ಉಡುಪಿ: ಮಂಗಳೂರು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ್ ಹಾಗೂ ಇತರೆ ವಿಭಾಗದ ಉಪನ್ಯಾಸಕರಿಗೆ ಐ.ಒ.ಟಿ. ಆಟೋಮೇಷನ್, ಸಿ.ಎನ್.ಸಿ ಮಿಲ್ಲಿಂಗ್ ಮತ್ತು ಟರ್ನಿಂಗ್, ತ್ರೀಡಿ ಪ್ರಿಂಟಿಂಗ್, ತ್ರೀಡಿ ಮಾಡೆಲಿಂಗ್ ಮುಂತಾದ ಅಲ್ಪಾವಧಿ ಕೈಗಾರಿಕಾ ತರಬೇತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ಉಪನ್ಯಾಸಕರು ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಬೈಕಂಪಾಡಿ, ಮಂಗಳೂರು ದೂ.ಸಂಖ್ಯೆ: 0824-248003, ಮೊ.ನಂ: 9880591219, 7975621917 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.