ಉಡುಪಿ: ಅಂಬಲಪಾಡಿಯಲ್ಲಿ ನಡೆದ 2ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಿಕೆಸಿ ಪರ್ಕಳ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ 6 ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶೋಧನ್ – ಪುರುಷರ ಸೀನಿಯರ್ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ 2 ಗ್ರ್ಯಾಂಡ್ ಚಾಂಪಿಯನ್, ಸೌಂದರ್ಯ – ಹುಡುಗಿಯರ ಸೀನಿಯರ್ ಕಟಾ ವಿಭಾಗದ ಗ್ರ್ಯಾಂಡ್ ಚಾಂಪಿಯನ್, ಛಾಯಾ – ಹುಡುಗಿಯರ ಸೀನಿಯರ್ ಕುಮೀತೆ ವಿಭಾಗದ ಗ್ರ್ಯಾಂಡ್ ಚಾಂಪಿಯನ್, ಪ್ರನುಷಾ – ಹುಡುಗಿಯರ ಜೂನಿಯರ್ ಕಟಾ ವಿಭಾಗದ ಗ್ರ್ಯಾಂಡ್ ಚಾಂಪಿಯನ್, ಅಮೋಘ್ – ಹುಡುಗರ ಜೂನಿಯರ್ ವಿಭಾಗದ ಕಟಾ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತಾರೆ. ಇವರೆಲ್ಲರೂ ಪ್ರವೀಣ ಸುವರ್ಣ ಇವರಿಂದ ತರಬೇತಿ ಪಡೆದಿದ್ದಾರೆ.
ರಾಷ್ಟ್ರಮಟ್ಟದ ಕರಾಟೆ- ಪಿಕೆಸಿ ಪರ್ಕಳ ತಂಡದ ಅಮೋಘ ಸಾಧನೆ

ರಾಷ್ಟ್ರಮಟ್ಟದ ಕರಾಟೆ- ಪಿಕೆಸಿ ಪರ್ಕಳ ತಂಡದ ಅಮೋಘ ಸಾಧನೆ
Date: