Tuesday, November 26, 2024
Tuesday, November 26, 2024

ಸಾಕ್ಷರತೆಯಿಂದ ಹಕ್ಕುಗಳ ಬಗ್ಗೆ ಅರಿಯಲು ಸಾಧ್ಯ: ನ್ಯಾ.ಶರ್ಮಿಳಾ

ಸಾಕ್ಷರತೆಯಿಂದ ಹಕ್ಕುಗಳ ಬಗ್ಗೆ ಅರಿಯಲು ಸಾಧ್ಯ: ನ್ಯಾ.ಶರ್ಮಿಳಾ

Date:

ಉಡುಪಿ: ಯಾವುದೇ ವ್ಯಕ್ತಿ ಸಾಕ್ಷರನಾದರೆ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದುವುದು ಅತ್ಯಂತ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು.

ಅವರು ಕಾಜಾರಗುತ್ತುನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಕಾರಾಗೃಹ ಉಡುಪಿ ಇವರ ಸಹಯೋಗದಲ್ಲಿ “ಶಿಕ್ಷಣದಿಂದ ಬದಲಾವಣೆ” ಕಾರಾಗೃಹದ ಅನಕ್ಷರಸ್ಥ ಹಾಗೂ ಅರೆ ಅನಕ್ಷರಸ್ಥ ಬಂಧಿಗಳಿಗೆ ಆಯೋಜಿಸಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಕ್ಷರತೆ ಪಡೆಯುವುದು ವ್ಯಕ್ತಿಯ ಘನತೆ ಹಾಗೂ ಹಕ್ಕು ಆಗಿದೆ. ವ್ಯಕ್ತಿ ಸಾಕ್ಷರತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅನಕ್ಷರತೆಯಿಂದ ಬಡತನ, ಜನಸಂಖ್ಯೆ ನಿಯಂತ್ರಣ ಸಮಸ್ಯೆ, ಲಿಂಗ ಅಸಮಾನತೆ ಉಂಟಾಗಲಿದ್ದು, ಇದನ್ನು ತೊಡೆದು ಹಾಕಿ ದೇಶವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಸಾಕ್ಷರತೆಯಿಂದ ಮಾತ್ರ ಸಾಧ್ಯ ಎಂದು ಆಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಪ್ರತಿಯೊಬ್ಬರಿಗೂ ಕನಿಷ್ಠ ಓದುವ ಸಾಮರ್ಥ್ಯ ಅಗತ್ಯ. ಇದರಿಂದ ತಮ್ಮ ದೈನಂದಿನ ವ್ಯವಹಾರಗಳನ್ನು ಸುಗಮವಾಗಿ ಮಾಡಲು ಸಾಧ್ಯ. ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾವಂತರದ್ದಾಗಿದೆ. ವಯಸ್ಕರ ಶಿಕ್ಷಣ ಇಲಾಖೆಯಿಂದ ಸಿದ್ದಪಡಿಸಿರುವ ಪಠ್ಯವು ಅತ್ಯಂತ ಸರಳವಾಗಿದ್ದು, ಇದರಿಂದ 2 ತಿಂಗಳಲ್ಲಿ ಅನಕ್ಷರಸ್ಥರು ಸಾಕ್ಷರರಾಗಲು ಸಾದ್ಯವಿದೆ ಎಂದರು.

ಜಿಲ್ಲಾ ಕಾರಾಗೃಹದಲ್ಲಿನ 7 ಮಂದಿ ಅನಕ್ಷರಸ್ಥರು ಮತ್ತು 20 ಮಂದಿ ಅರೆ ಅನಕ್ಷರಸ್ಥರಿಗೆ ಈ ತರಬೇತಿ ಆಯೋಜಿಸಲಾಗಿದೆ. ಕಾರಾಗೃಹದಲ್ಲಿನ ಗ್ರಂಥಾಲಯವನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಉದ್ಘಾಟಿಸಿದರು.

ಎಎಸ್ಪಿ ಕುಮಾರಚಂದ್ರ ಕಾರಾಗೃಹದಲ್ಲಿನ ಅನಕ್ಷರಸ್ಥರು ಮತ್ತು ಅರೆ ಅನಕ್ಷರಸ್ಥರಿಗೆ ಕಲಿಕಾ ಪುಸ್ತಕಗಳನ್ನು ವಿತರಿಸಿದರು.

ಹಿರಿಯ ವಕೀಲೆ ಅಮೃತಕಲಾ ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ಸ್ವಾಗತಿಸಿ ನಿರೂಪಿಸಿದರು. ಸಂಜಯ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!