ಉಡುಪಿ: ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊ೦ದಿಗೆ ಬುಧವಾರ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಚಪ್ಪರ ಮೂಹೂರ್ತ ಕಾರ್ಯಕ್ರಮ ವೇದಮೂರ್ತಿ ಹಯವದನ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆಯಿತು.
ಸ೦ಚಾಲಕರಾದ ಎಂ ನಾಗರಾಜ್ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ, ಸದಾಶಿವ ಪೂಜಾರಿ, ರಾಘವೇಂದ್ರ ಭಟ್, ಸುಧಾಕರ ಪೂಜಾರಿ, ಜತೆ ಕೋಶಾಧಿಕಾರಿಗಳಾದ ಕೆ. ನಾಗರಾಜ್ ಭಟ್, ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಲಹೆಗಾರರಾದ ಪುತ್ತೂರು ಹಯವದನ ತಂತ್ರಿ, ಗೋಪಾಲಕೃಷ್ಣ ಜೋಯಿಸ, ಮಹಿತೋಷ್ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ವಿಠ್ಠಲ್ ಮೂರ್ತಿ ಆಚಾರ್ಯ, ಭಾರತಿ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ನಾಗರಾಜ್ ಪಣಿಯಾಡಿ, ಶ್ರೀಧರ ಭಟ್, ಕುಂಜಿಬೆಟ್ಟು ವಾರ್ಡಿನ ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ರಮೇಶ್ ಭಟ್, ಚಪ್ಪರದ ಉಸ್ತುವಾರಿ ಮಂಜುನಾಥ ಹೆಬ್ಬಾರ್, ಸುಗುಣಮಾಲ ಮುದ್ರಣದ ಸುರೇಶ್ ಕಾರಂತ್ ಮತ್ತು ಊರಿನ ಭಕ್ತರು ಉಪಸ್ಥಿತರಿದ್ದರು.