Sunday, January 12, 2025
Sunday, January 12, 2025

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿದರೆ ಜೀವನ ಸಾರ್ಥಕ: ರಾಘವೇಂದ್ರ ಪ್ರಭು

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿದರೆ ಜೀವನ ಸಾರ್ಥಕ: ರಾಘವೇಂದ್ರ ಪ್ರಭು

Date:

ಉಡುಪಿ, ಜ.12: ಸ್ವಾಮಿ ವಿವೇಕಾನಂದರ ಸಂದೇಶಗಳು ಶತಶತಮಾನಗಳಿಗೂ ಅನ್ವಯ, ಅವರ ದಿವ್ಯ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ, ನವ್ಯ ಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್, ಕನ್ನಡ ಜಾನಪದ ಪರಿಷತ್ ಇದರ ವತಿಯಿಂದ ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜನವರಿ 12ರಂದು ನಡೆದ ರಾಷ್ಟ್ರೀಯ ಯುವ ದಿನಾಚರಣೆ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ, ಮಾತನಾಡಿದರು. ಸ್ವಾಮೀಜಿ ಬದುಕಿದ್ದು ಅತ್ಯಂತ ಕಡಿಮೆ ಸಮಯ, ಆದರೆ ಮಾಡಿದ ಸಾಧನೆ ಹೆಚ್ಚು ಎಂದರು.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಮಾತನಾಡಿ, ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಆದರ್ಶರು. ಅವರ ಕೊಡುಗೆಯನ್ನು ನಾವೆಲ್ಲರೂ ಸದಾ ನೆನಪು ಮಾಡಬೇಕು ಎಂದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ನಾವು ಪೂಜಿಸಬೇಕು. ಸ್ವಾಮಿ ವಿವೇಕಾನಂದರು ಚಿಕಾಗೋನಲ್ಲಿ ಮಾಡಿದ ಭಾಷಣ ಇಂದಿಗೂ ಅಲ್ಲಿನ ಜನರು ನೆನಪು ಮಾಡಿಕೊಳ್ಳುತ್ತಾರೆ. ಅಂತಹ ಶ್ರೇಷ್ಠ ಸಂತ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದರು. ಎಬಿವಿಪಿ ಜಿಲ್ಲಾ ಪ್ರಮುಖ್ ರಾಜಶಂಕರ್, ಸ್ವಾಮೀಜಿಯವರು ರಚನೆ ಮಾಡಿದ ಭಾರತ ಮಾತೆಯ ಭಕ್ತಿ ಗೀತೆಯ ಬಗ್ಗೆ ಮಾತನಾಡಿದರು. ಹಾಸ್ಟೆಲ್ ನ ಗಿರಿಜಾ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ನೀಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉದ್ಯಾವರ: ಜಾನುವಾರು ಜಾಗೃತಿ ಶಿಬಿರ

ಉದ್ಯಾವರ, ಜ.11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಪಶುಪಾಲನಾ ಮತ್ತು ಪಶುವೈದ್ಯಕೀಯ...

ಉಡುಪಿಯಲ್ಲಿ ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ

ಉಡುಪಿ, ಜ.11: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ...

ರೈಲು ನಿಲ್ದಾಣದ ಸೀಲಿಂಗ್ ಸ್ಲ್ಯಾಬ್ ಕುಸಿತ: ಹಲವರಿಗೆ ಗಾಯ

ಕಾನ್ಪುರ, ಜ.11: ನಿರ್ಮಾಣ ಹಂತದ ಕಟ್ಟಡದ ಸೀಲಿಂಗ್ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದ...

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳ ಭೇಟಿ

ಕೋಟ, ಜ.11: ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಛೇರಿಗೆ ನಬಾರ್ಡ್...
error: Content is protected !!