Monday, January 6, 2025
Monday, January 6, 2025

ಸಮಾಜಸೇವಕ ಗಣಪತಿ ಟಿ ಶ್ರೀಯಾನ್‌ಗೆ ಸನ್ಮಾನ

ಸಮಾಜಸೇವಕ ಗಣಪತಿ ಟಿ ಶ್ರೀಯಾನ್‌ಗೆ ಸನ್ಮಾನ

Date:

ಕೋಟ, ಜ.3: ನಾಟಕಾಷ್ಟಕ ಭಿನ್ನ ಭಿನ್ನವಾಗಿ ರಂಗದಲ್ಲಿ ಕಂಡವು. ವೃತ್ತಿಪರ ಕಲಾವಿದರನ್ನೂ ಮೀರಿಸುವ ರಂಗ ಪ್ರಸ್ತುತಿ ಕೆಲವು ಮಕ್ಕಳ ರಂಗಭೂಮಿಯ ನಾಟಕಗಳಾದವು. ತೆಕ್ಕಟ್ಟೆ ಭಾಗದಲ್ಲಿ ರಂಗಭೂಮಿಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಹೆಗ್ಗಳಿಕೆ ಸಂಸ್ಥೆಯದ್ದು. ಕಲಾ ಪೋಷಕರನ್ನು ಗುರುತಿಸಿ, ಗೌರವಿಸಿದ ಚುಟುಕು ಸಭಾ ಕಾರ್ಯಕ್ರಮ ಇತರರಿಗೆ ಮಾರ್ಗದರ್ಶನವಾಗಿತ್ತು ಎಂದು ಬಸ್ರೂರು ಶಾರದ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಶೆಟ್ಟಿ ಸಮಾಜಸೇವಕ ಗಣಪತಿ ಟಿ. ಶ್ರೀಯಾನರನ್ನು ಅಭಿನಂದಿಸಿ ಮಾತನಾಡಿದರು. ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ಜನವರಿ 1 ರಂದು ‘ನಾಟಕಾಷ್ಟಕ’ ಕಾರ್ಯಕ್ರಮದ 7 ನೇಯ ದಿನದಲ್ಲಿ ಸಮಾಜಸೇವಕ ಗಣಪತಿ ಟಿ. ಶ್ರೀಯಾನರನ್ನು ಗೌರವಿಸಿ ರಾಘವೇಂದ್ರ ಶೆಟ್ಟಿ ಮಾತನಾಡಿದರು. ಎಸ್. ಎಮ್. ಎಸ್. ಕಾಲೇಜಿನ ಪ್ರಾಂಶುಪಾಲರಾದ ಅಭಿಲಾಷ ಸೋಮಯಾಜಿ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ, ಗಣೇಶ್ ಕೊಮೆ, ಸಾತ್ಯಕಿ ಪಂಜಿಗಾರು, ರಾಹುಲ್ ಅಮೀನ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಸ್. ಎಮ್. ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ಪಂಜರ ಶಾಲೆ’ ನಾಟಕ ರಂಗ ಪ್ರಸ್ತುತಿಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೃತ ಬಾಣಂತಿಯರ ಕುಟುಂಬಕ್ಕೆ ತಲಾ ರೂ. 25 ಲಕ್ಷ ಪರಿಹಾರ ಘೋಷಿಸಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಶಿವಮೊಗ್ಗ, ಜ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಇದ್ದರೆ ತಡಮಾಡದೆ ಮೃತ...

ಶಕ್ತಿ ಯೋಜನೆಯ ಬಗ್ಗೆ ತಿಳಿಯಲು ರಾಜ್ಯಕ್ಕೆ ಭೇಟಿ ನೀಡಿದ ಆಂಧ್ರಪ್ರದೇಶ ಸಚಿವರ ತಂಡ

ಬೆಂಗಳೂರು, ಜ.5: ಆಂಧ್ರಪ್ರದೇಶ ಸರ್ಕಾರದ ಸಾರಿಗೆ, ಯುವಜನ & ಕ್ರೀಡಾ ಸಚಿವ...

ನಾಲ್ಕು ದಶಕಗಳ ದಾಖಲೆಯನ್ನು ಮುರಿದಿದ ಟಾಟಾ ಮೋಟಾರ್ಸ್; ಮಾರುತಿ ಸುಜುಕಿಯ ವ್ಯಾಗನ್ ಆರ್ ಮೀರಿಸಿ ಅಗ್ರಸ್ಥಾನದಲ್ಲಿ ‘ಪಂಚ್’

ನವದೆಹಲಿ, ಜ.5: ಟಾಟಾ ಮೋಟಾರ್ಸ್ ಅಂತಿಮವಾಗಿ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ನಾಲ್ಕು...

ಕೋಸ್ಟ್ ಗಾರ್ಡ್‌ನ ಲಘು ಹೆಲಿಕಾಪ್ಟರ್ ಪತನ; ಮೂರು ಸಾವು

ಪೋರಬಂದರ್‌, ಜ.5: ಭಾರತೀಯ ಕೋಸ್ಟ್ ಗಾರ್ಡ್‌ನ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಹೆಚ್)...
error: Content is protected !!