ಬಾರಕೂರು, ಜ.1: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು, ವಾಣಿಜ್ಯಶಾಸ್ತ್ರ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಮತ್ತು ಕಾಮರ್ಸ್ ಫೋರಮ್ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತರ್ ಕಾಲೇಜು ಟ್ಯಾಲೆಂಟ್ ಹಂಟ್ 2024-25 ಕಾರ್ಯಕ್ರಮ ಜನವರಿ 3 ರಂದು ಕಾಲೇಜಿನ ರೂಸಾ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಟ್ಯಾಲೆಂಟ್ ಹಂಟ್, ತಜ್ಞರಿಂದ ಲೈವ್ ಇಂಟರ್ವ್ಯೂವ್ ಡೆಮೋ, ವಿಡಿಯೋ ಮೇಕಿಂಗ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳ ಭಾಗವಾಗಿ ರಿಟನ್ ಟೆಸ್ಟ್, ಗುಂಪು ಚರ್ಚೆ, ಪ್ಯಾನೆಲ್, ಸ್ಟ್ರೆಸ್ ಇಂಟರ್ವ್ಯೂವ್, ಸರ್ಪ್ರೈಸ್ ಈವೆಂಟ್ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ನೊಂದಣಿಯು ಉಚಿತವಾಗಿದೆ. ಸ್ಪರ್ಧಾಳುಗಳು ತಮ್ಮ ಬಯೋಡಾಟಾ (ಸಿವಿ) 3 ಪ್ರತಿಗಳನ್ನು ಸ್ಪರ್ಧೆಯ ದಿನದಂದು ನೊಂದಣಿ ಕೌಂಟರ್ ನಲ್ಲಿ ನೀಡಬೇಕು.
ಅದೇ ರೀತಿ ತುಣುಕು ವಿಡಿಯೋ ಸ್ಪರ್ಧೆಯನ್ನು ಕೂಡ ಆಯೋಜಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9164668334 ರಾಧಾಕೃಷ್ಣ ನಾಯಕ್ ರವರನ್ನು ಸಂಪರ್ಕಿಸಲು ಕೋರಲಾಗಿದೆ.