Saturday, January 4, 2025
Saturday, January 4, 2025

ಬಜೆ ಅಣೆಕಟ್ಟು ಪ್ರದೇಶಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ; ನೀರಿನ ಮಟ್ಟ ಪರಿಶೀಲನೆ

ಬಜೆ ಅಣೆಕಟ್ಟು ಪ್ರದೇಶಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ; ನೀರಿನ ಮಟ್ಟ ಪರಿಶೀಲನೆ

Date:

ಹಿರಿಯಡಕ, ಡಿ.31: ಉಡುಪಿ ನಗರಸಭೆಯ ಕುಡಿಯುವ ನೀರಿನ ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಬಜೆ ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಬಗ್ಗೆ ಚರ್ಚೆ ನಡೆಸಿ ಬೇಸಿಗೆ ಕಾಲದಲ್ಲಿ ನಗರದ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ. ನೀಡಿದರು. ವಾರಾಹಿ ಯೋಜನೆಯ ನೀರು ಸರಬರಾಜು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೊರೆತರೂ ಬಜೆ ಅಣೆಕಟ್ಟಿನ ನೀರು ಸರಬರಾಜಿಗೆ ಕೂಡ ಆದ್ಯತೆ ನೀಡುವಂತೆ ತಿಳಿಸಿದರು.

ನಗರಸಭೆ ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಕಲ್ಮಾಡಿ, ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಟಿ. ಜಿ. ಹೆಗ್ಡೆ, ಮಂಜುನಾಥ ಮಣಿಪಾಲ, ವಿಜಯಲಕ್ಷ್ಮೀ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದುರ್ಗಾಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಥಬೀದಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ದಶಮ ಸಂಭ್ರಮಕ್ಕೆ ಚಾಲನೆ

ಮಂಗಳೂರು, ಜ.3: ಡಾ.ಪಿ ದಯಾನಂದ ಪೈ ಪಿ ಸತೀಶ ಪೈ ಸರ್ಕಾರಿ...

ದೇಶದೆಲ್ಲೆಡೆ ಗ್ರಂಥಾಲಯ ಆಂಧೋಲನವಾಗಲಿ: ಡಾ. ಮಹಾಬಲೇಶ್ವರ ರಾವ್

ಉಡುಪಿ, ಜ.3: ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು...

ಹಾವುಗಳು ಪ್ರಕೃತಿಯ ಒಡಲಿನ ಒಡನಾಡಿ: ಗುರುರಾಜ್ ಸನಿಲ್

ಕೋಟ, ಜ.3: ಪರಿಸರ ಜೀವ ಸಮತೋಲನದಲ್ಲಿ ಪ್ರಕೃತಿಯೇ ಸೃಷ್ಟಿಸಿಕೊಂಡ ಅನೇಕ ಪ್ರಬೇಧದ...

ಸಮಾಜಸೇವಕ ಗಣಪತಿ ಟಿ ಶ್ರೀಯಾನ್‌ಗೆ ಸನ್ಮಾನ

ಕೋಟ, ಜ.3: ನಾಟಕಾಷ್ಟಕ ಭಿನ್ನ ಭಿನ್ನವಾಗಿ ರಂಗದಲ್ಲಿ ಕಂಡವು. ವೃತ್ತಿಪರ ಕಲಾವಿದರನ್ನೂ...
error: Content is protected !!