ಕೋಟ, ಡಿ.28: ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿ ಬ್ಯಾಂಕ್ ಆಗಿ ರೂಪುಗೊಂಡು ರಾಷ್ಟ್ರೀಯ ಮಟ್ಟದಲ್ಲೂ ಶಾಖೆ ಹೊಂದಿ ಜನಮನ್ನಣೆ ಗಳಿಸಿದ ಬ್ಯಾಂಕ್ ಆಗಿದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಮೊಕ್ತೇಸರ ವಿಷ್ಣುಮೂರ್ತಿ ಉಪಾಧ್ಯ ಹೇಳಿದರು. ಕೋಟದ ಕರ್ಣಾಟಕ ಬ್ಯಾಂಕ್ 58ರ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಭಂಧಕ ವಾದಿರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ವಿಧಿ ವಿಧಾನವನ್ನು ವೇ.ಮೂ ಶ್ರೀಧರ ಪುರಾಣಿಕ್ ನೆರವೇರಿಸಿದರು. ಕೋಟ ಶಾಖೆಯ ಸಿಬ್ಬಂದಿ ಶ್ರೀಮತಿ ನಾಗೇಶ್ ಮಯ್ಯ ಧಾರ್ಮಿಕ ವಿಧಿವಿಧಾನದ ಗಣಹೋಮದಲ್ಲಿ ಭಾಗಿಯಾದರು.
ಕರ್ಣಾಟಕ ಬ್ಯಾಂಕ್ ನಿವೃತ್ತ ಡಿ.ಜಿ.ಎಂ ಆನಂದರಾಮ ಅಡಿಗ, ಸಾನ್ವಿ ಟೆಕ್ನಾಲಜಿ ಇದರ ಚೇರ್ಮೆನ್ ಚಿನ್ಮಯ್ ಬಾಯರಿ, ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು. ಕೋಟ ಶಾಖೆಯ ಸಹಾಯಕ ಪ್ರಬಂಧಕಿ ಜ್ಯೋತಿ ಕುಮಾರಿ ಸ್ವಾಗತಿಸಿ, ಸಮಿತ್ ವಂದಿಸಿದರು. ವಿನಯ್ ಕಾಂಚನ್ ನಿರೂಪಿಸಿದರು.