ಉಡುಪಿ, ನ.20: ಉಡುಪಿ ನಗರಸಭೆ ಕಚೇರಿಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರೂ, ಬಿಜೆಪಿ ಹಿರಿಯ ಮುಖಂಡರಾಗಿದ್ದ ದಿ. ಮಲ್ಪೆ ಸೋಮಶೇಖರ ಭಟ್ ರವರ ಭಾವಚಿತ್ರ ಅನಾವರಣ ಸಮಾರಂಭ ನಡೆಯಿತು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡುತ್ತಾ, ಉಡುಪಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ, ಜನಪರ ಆಡಳಿತಕ್ಕೆ ಸೋಮಶೇಖರ್ ಭಟ್ ರವರ ಕೊಡುಗೆಗಳನ್ನು ಸ್ಮರಿಸಿದರು.
ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಕಲ್ಮಾಡಿ, ನಗರಸಭೆಯ ಮಾಜಿ ಅಧ್ಯಕ್ಷರಾದ ಚಿತ್ತರಂಜನ್ ದಾಸ್ ಹೆಗ್ಡೆ, ಕಿರಣ್ ಕುಮಾರ್ ಬೈಲೂರು, ಮಾಜಿ ಸದಸ್ಯರಾದ ಡಾ. ಆನಂದ ಶೆಟ್ಟಿ, ನಗರಸಭೆಯ ಸದಸ್ಯರು, ದಿ. ಸೋಮಶೇಖರ್ ಭಟ್ ರವರ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.