Tuesday, January 21, 2025
Tuesday, January 21, 2025

ರಾಜ್ಯಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

ರಾಜ್ಯಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

Date:

ಉಡುಪಿ, ನ.20: ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸೆಂಬರ್ 28 ರಂದು ರಾಜ್ಯ ಮಟ್ಟದ ರೆಡ್‌ಕ್ರಾಸ್ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪುಸ್ತಕ ಶುಲ್ಕ ಇಪ್ಪತ್ತೈದು, ಪರೀಕ್ಷಾ ಶುಲ್ಕ ನಲ್ವತ್ತು ರೂಪಾಯಿ ಸೇರಿದಂತೆ ಒಟ್ಟು ಅರುವತ್ತೈದು ರೂಪಾಯಿಗಳ ಶುಲ್ಕ ನೀಡಬೇಕು. ಪರೀಕ್ಷೆಗಳು ಆಯಾಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಲಾಗುವುದು. ಪರೀಕ್ಷೆಯು ನೂರು ಅಂಕದ ಬಹುಆಯ್ಕೆ ಮತ್ತು ಲಿಖಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ವಿವರಗಳಿಗೆ http://www.redcrosskarnataka.org ಇದರ ಜೂನಿಯರ್ ರೆಡ್ ಕ್ರಾಸ್ ಪೇಜಿನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ರಾಜ್ಯ ಘಟಕದ ಕಿರಿಯ ರೆಡ್‌ಕ್ರಾಸ್ ವಿಭಾಗದ ಹರೀಶ್ ಎಮ್ – ಮೊ.ನಂ: 9632140642 ಅಥವಾ ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮೊಬೈಲ್ ಸಂಖ್ಯೆ: 9964583433 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!