Friday, November 15, 2024
Friday, November 15, 2024

‘ಕಾವಿ ಕೆಲಿಡೋಸ್ಕೋಪ್’: ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

‘ಕಾವಿ ಕೆಲಿಡೋಸ್ಕೋಪ್’: ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Date:

ಉಡುಪಿ, ನ.14: ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಕಾವಿ ಕೆಲಿಡೋಸ್ಕೋಪ್’ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ. ಕುಮಾರ್‌ರವರಿಂದ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. ದೇಶೀಯ ಪಾರಂಪರಿಕ ಕಾವಿ ಕಲೆಯ ಹೂರಣವನ್ನು ಹಾವಂಜೆಯವರು ಈ ಪ್ರದರ್ಶನದಲ್ಲಿ ಕಲಾ ರಸಿಕರಿಗೆ ಉಣಬಡಿಸಿದ್ದಾರೆ. ಕರ್ನಾಟಕದ ಕರಾವಳಿಯ ಭಾಗದ ಈ ಅನೂಹ್ಯ ಕಲೆಯನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಈ ಕಲೆಗೆ ಆದಷ್ಟು ಶೀಘ್ರದಲ್ಲಿ ಕರ್ನಾಟಕಕ್ಕೆ ಜಿ.ಐ. ಟ್ಯಾಗ್ ದೊರಕಲಿ. ಅಕಾಡೆಮಿಯಿಂದ ಈ ಕಲೆಯ ಬೆಳೆಸುವಿಕೆಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ.ಸ. ಕುಮಾರ್‌ ಹೇಳಿದರು.

ಹಿರಿಯ ಕಲಾವಿದರಾದ ಗುರುದಾಸ್ ಶೆಣೈ ಮಾತನಾಡುತ್ತಾ, ಅಧ್ಯಯನಶೀಲ ಸಮಕಾಲೀನ ಕಲಾವಿದನೋರ್ವನ ಕೈಯಲ್ಲಿ ಪ್ರಾಂತೀಯ ಕಲೆಯೊಂದು ದೊರೆತಾಗ ಅದು ಹೊರ ಹೊಮ್ಮಿಸುವ ರೂಪಗಳಿಗೆ ಈ ಕಲಾಪ್ರದರ್ಶನವೇ ಸಾಕ್ಷಿ ಎಂದರು. ಅತಿಥಿಗಳಾದ ಲಹರಿ ಗ್ರೂಪ್‌ನ ರೂಪಾ ಹರಿಪ್ರಸಾದ್, ಹಲವು ಹಿರಿಯ ಕಲಾವಿದರು, ಆರ್ಕಿಟೆಕ್ಟ್ಸ್ ಸಮಾರಂಭದಲ್ಲಿದ್ದರು. ಕಲಾವಿದ ಡಾ. ಜನಾರ್ದನ ಹಾವಂಜೆ ಕಟ್ಟಡಗಳ ಮೇಲೆ ಕೆಮ್ಮಣ್ಣಿನ ಮೇಲೆ ಗೀರಿ ರಚಿಸಲಾಗುವ ಈ ಅಳಿವಿನಂಚಿನ ಪುರಾತನ ಕಲೆಯ ಬಗೆಗೆ ವಿವರಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ: ಯಶ್ಪಾಲ್ ಸುವರ್ಣ

ಉಡುಪಿ, ನ.14: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ...

ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯ: ಡಾ. ರಂಜಿತ ರಾವ್

ಮಂಗಳೂರು, ನ.14: ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣವನ್ನು ಉಳಿಸಬಹುದು...

ಅಧ್ಯಕ್ಷರ ಆಯ್ಕೆ: ಚುನಾವಣಾ ಅಧಿಕಾರಿ ನೇಮಕ

ಉಡುಪಿ, ನ.14: ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಲ್ಲೂರು ಗ್ರಾಮ...

ಡಿ. ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ: ಅರ್ಜಿ ಆಹ್ವಾನ

ಉಡುಪಿ, ನ.14: ಹಿಂದುಳಿದ ವರ್ಗಗಳ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ...
error: Content is protected !!