Monday, January 20, 2025
Monday, January 20, 2025

ವಿದ್ಯಾ ಸರಸ್ವತಿ ಮಡಿಲಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಅವಾರ್ಡ್

ವಿದ್ಯಾ ಸರಸ್ವತಿ ಮಡಿಲಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಅವಾರ್ಡ್

Date:

ಉಡುಪಿ, ನ.13: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ ಪ್ರತಿಷ್ಟಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.​ ಈ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀಪಾದ್ ನಾಯಕ್ ರವರ ಮೂಲಕ ನೀಡಲಾಯಿತು.

ವಿದ್ಯಾ ಸರಸ್ವತಿಯವರು ಮಿಸೆಸ್ ಇಂಡಿಯಾ ಕರ್ಣಾಟಕದ ‘ವಾರಿಯರ್ ಕ್ವೀನ್’ ಟ್ರೆಡಿಷನಲ್ ವಿನ್ನರ್ ಆಗಿದ್ದಾರೆ. 2022ರ ಕ್ಯೂಟೆಸ್ಟ್ ಮೊಮ್ ಕಿರೀಟವನ್ನೂ ಪಡೆದಿದ್ದಾರೆ.​ ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದರು. 2023 ಹಾಗೂ 2024 ರಲ್ಲಿ ಉಡುಪಿ ಕೈಮಗ್ಗ ಸೀರೆಯನ್ನುಟ್ಟು ಸ್ವತಃ ರೂಪದರ್ಶಿಯಾಗಿ 2000 ಕ್ಯಾಲೆಂಡರ್ ನ್ನು ರಾಜ್ಯ ಅಂತರಾಜ್ಯಗಳಲ್ಲಿ ಹೋಗಿ ಜನರಿಗೆ ಹಂಚಿ​, ನೇಕಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಟ್ಟಿ​ದ್ದರು. ಅಲ್ಲದೆ ಸತತವಾಗಿ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು, 2024 ರ ಆಟಿ ಕೂಟದ ಸಂಚಾಲಕಿಯಾಗಿ​ ಕಾರ್ಯನಿರ್ವಹಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!