Sunday, January 19, 2025
Sunday, January 19, 2025

ಕಾರಂತರದ್ದು ಶ್ರೇಷ್ಠ ವ್ಯಕ್ತಿತ್ವ: ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್

ಕಾರಂತರದ್ದು ಶ್ರೇಷ್ಠ ವ್ಯಕ್ತಿತ್ವ: ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್

Date:

ಕೋಟ, ನ.10: ಕಾರಂತರು ಹುಟ್ಟಿದ ನೆಲದಲ್ಲಿ ಧನ್ಯತೆಯ ಭಾವ ಮೈದುಂಬಿದೆ. ಪ್ರಶಸ್ತಿ ಸ್ವೀಕರಿಸಿದ ನನ್ನ ಗೌರವ ಉತ್ತುಂಗಕ್ಕೇರಿಸಿದೆ ಎಂದು ಕನ್ನಡದ ಶ್ರೇಷ್ಠ ವಾಗ್ಮಿ ಸಾಹಿತಿ ಪ್ರೊ. ಕೃಷ್ಣೆ ಗೌಡ ಮೈಸೂರು ಹೇಳಿದರು. ಭಾನುವಾರ ಕೋಟತಟ್ಟು ಕಾರಂತ ಥೀಂ ಪಾರ್ಕನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಡಾ.ಕೋಟ ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿ 20 ನೇ ವರ್ಷದ ಕಾರ್ಯಕ್ರಮದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಒರ್ವ ಶ್ರೇಷ್ಠ ಸಾಹಿತಿ ಈ ಮಣ್ಣಿನಲ್ಲಿ ಹುಟ್ಟವ ತಾಕತ್ತು ಮತ್ತೆಲ್ಲಿ ಕಾಣಲು ಸಾಧ್ಯ? ಕಾರಂತರೆಂದರೆ ಬಹುವ್ಯಕ್ತಿತ್ವದ ಚಿಂತನಾಶೀಲ, ಪ್ರಯೋಗಶೀಲ ವಿವಿಧ ಸ್ತರದಲ್ಲಿ ಬೆಳಕ ಚೆಲ್ಲುವ ಅಪರೂಪದ ಶಕ್ತಿ. ಅವರಂತೆ ಎಲ್ಲರನ್ನು ಕಾಣಲು ಸಾಧ್ಯವಿಲ್ಲ ಅವರಿಗೆ ಅವರೇ ಸಾಟಿ ಎಂಬಂತೆ ತಮ್ಮ ಜೀವಿತ ಅವಧಿಯಲ್ಲಿ ಬದುಕಿ ತೊರಿಸಿದ್ದಾರೆ. ತನ್ನ ಕಾದಂಬರಿಯ ಮೂಲಕ ಪ್ರಪಂಚಕ್ಕೆ ನೈಜ ಚಿತ್ರಣದ ಚಿತ್ತಾರವನ್ನು ಪ್ರಯೋಗಿಸಿದ್ದಾರೆ. ಇಂಥಹ ಕಾರಂತರ ಪ್ರಶಸ್ತಿ ಪಡೆಯುವ ಸಾಲಿನಲ್ಲಿ ನನ್ನಂತವರ ಹೆಸರು ಮುಂಚೂಣಿಗೆ ನಿಲ್ಲಿಸಿದ್ದು ಸಾರ್ಥಕ್ಯ ಕಂಡ ಅನುಭವ ಸಿಕ್ಕಿದೆ ಎಂದರು.

ಪ್ರಶಸ್ತಿ ಪ್ರಧಾನಿಸಿದ ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯ ಶಂಕರ್ ಮಾತನಾಡಿ, ಕಾರಂತರ ಬದಕು ಅವರ ಹೋರಾಟದ ದಾರಿ ಹಲವು ಮಜಲುಗಳ ಕೇಂದ್ರವಾಗಿದೆ. ಕಾರಂತರು ಪಡೆದ ಜ್ಞಾನಪೀಠ ಈ ಜಗತ್ತಿಗೆ ಸದಾ ಹಸಿರಾಗಿ ಉಳಿದ ಶಾಶ್ವತ ಪೀಠವಾಗಿದೆ. ಕಾರಂತರೂರಿಗೆ ಬರುವುದೇ ನನ್ನ ಜನ್ಮ ಜನ್ಮದ ಭಾಗ್ಯವಾಗಿದೆ. ಅವರದ್ದು ಅಪರೂಪದ ಕನ್ನಡ ನಾಡೆ ಗೌರವ ನೀಡುವ ವ್ಯಕ್ತಿತ್ವವಾಗಿದೆ.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಅವಿಭಜಿತ ಜಿಲ್ಲೆಗಳ ಸಾಧಕ ಗ್ರಾಮ ಪಂಚಾಯತ್ ಗಳಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಪ್ರಶಾಂತ್ ಸೂರ್ಯ ಇವರುಗಳನ್ನು ಅಭಿನಂದಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ವಂದ್ರ, ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್ ಶೆಣೈ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕಾರಂತ ಹುಟ್ಟೂರ ಪ್ರಶಸ್ತಿ ರೂವಾರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ ವಂದಿಸಿದರು. ಸಂಸದರ ಆಪ್ತ ಕಾರ್ಯದರ್ಶಿ ಹರೀಷ್ ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ಗ್ರಂಥಪಾಲಕಿ ಶೈಲಜ ಸಹರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!