Sunday, January 19, 2025
Sunday, January 19, 2025

ಶತಮಾನೋತ್ಸವ ಸಂಭ್ರಮದಲ್ಲಿ ನೆಲ್ಲಿಕಾರು ಶಾಲೆ

ಶತಮಾನೋತ್ಸವ ಸಂಭ್ರಮದಲ್ಲಿ ನೆಲ್ಲಿಕಾರು ಶಾಲೆ

Date:

ನೆಲ್ಲಿಕಾರು, ನ.3: ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ. ೨೦೨೫ರ ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಎರಡು ದಿನಗಳ ‘ಶತಮಾನೋತ್ಸವ ಸಂಭ್ರಮ’ ನಡೆಸಬೇಕೆಂದು ತೀರ್ಮಾನಿಸಲಾಗಿದೆ. ಶಾಲೆಯ ಗತ ವರ್ಷದ ನೆನಪಿನಲ್ಲಿ ಶಾಲಾ ಶತಮಾನೋತ್ಸವ ಸಮಿತಿಯು ಸ್ಮರಣ ಸಂಚಿಕೆಯನ್ನು ಪ್ರಕಟಿಸುವ ಆಶಯವನ್ನು ಹೊಂದಿದೆ. ಇದಕ್ಕಾಗಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಬರಹಗಳನ್ನು ಆಹ್ವಾನಿಸುತ್ತಿದೆ. ಶಾಲೆಯಲ್ಲಿ ಓದಿದ ಊರ-ಪರ ಊರುಗಳಲ್ಲಿ ನೆಲೆಸಿರುವ ಇಲ್ಲಿ ಕಲಿತ ಬಾಲ್ಯದ ನೆನಪುಗಳನ್ನು, ಪ್ರಭಾವ ಬೀರಿದ ಶಿಕ್ಷಕರನ್ನು ಕುರಿತಂತೆ, ಊರಿನ ಜೀವನ ಪ್ರೀತಿಯನ್ನು ಪದಪುಂಜಗಳಲ್ಲಿ ವ್ಯಕ್ತಪಡಿಸುವುದಕ್ಕೆ ಅವಕಾವಿದೆ. ಹಾಗೆಯೇ ತಮ್ಮಲ್ಲಿ ಶಾಲೆಗೆ ಸಂಬಂಧಪಟ್ಟಂತೆ ಸ್ಮರಣೀಯ ಭಾವಚಿತ್ರಗಳಿದ್ದಲ್ಲಿ ಶತಮಾನೋತ್ಸವ ಸ್ಮರಣಾ ಸಂಚಿಕೆ ಸಂಪಾದಕರಿಗೆ ಕಳುಹಿಸಿ ಕೊಡಲು ಕೋರಲಾಗಿದೆ. ೨೦೨೪ರ ಡಿಸೆಂಬರ್ ೩೧ರ ಒಳಗೆ [email protected] ಅಥವಾ 9449444240 ಈ ಸಂಪರ್ಕ ಸಂಖ್ಯೆಗೆ ಕಳುಹಿಸಿಕೊಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!