Thursday, October 31, 2024
Thursday, October 31, 2024

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

Date:

ಕೋಟ, ಅ.31: ಬದುಕಿನ ಆಯಾಮದಲ್ಲಿ ಪುನೀತ್ ರಾಜಕುಮಾರ್ ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಆ ಮೂಲಕ ಜೀವನದಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಹೇಳಿದರು. ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಸಾಮಾಜಿಕ ಹರಿಕಾರ ಚಿತ್ರನಟ ಪುನೀತ್ ರಾಜಕುಮಾರ್ ರವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುನೀತ್ ರಾಜಕುಮಾರ್ ಹೆಸರಿನಲ್ಲಿ ವಿದ್ಯಾನಿಧಿ ಯೋಜನೆ ರೂಪಿಸಿದ ಪಂಚವರ್ಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಅಭಿಮಾನ ಹೊಂದಿದ ಸಂಸ್ಥೆಯ ಸದಸ್ಯ ದಿನೇಶ್ ಆಚಾರ್ ರವರ ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್ ಪುನೀತ್‌ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಮುಖ್ಯಸ್ಥ ದಿನೇಶ್ ಆಚಾರ್ ಮಣೂರು ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ, ಅ.31: ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ...

ಯಕ್ಷಗಾನ ಕಲಾಕೇಂದ್ರ ‘ಯಕ್ಷ ಸಪ್ತಾಹ’ ಸಂಪನ್ನ

ಕೋಟ, ಅ.31: ಹಂಗಾರಕಟ್ಟೆ-ಐರೋಡಿಯ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ, ಕಲಾಕೇಂದ್ರದ ಸಂಸ್ಥಾಪಕ ದಿ.ಐರೋಡಿ...

ಹೋಂ ಡಾಕ್ಟರ್ ಫೌಂಡೇಶನ್: ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

ಉಡುಪಿ, ಅ.30: ಹೋಂ ಡಾಕ್ಟರ್ ಫೌಂಡೇಶನ್ ಇದರ ದಶಮಾನೋತ್ಸವ ಸಂಭ್ರಮ ಮತ್ತು...
error: Content is protected !!