ಕಟಪಾಡಿ, ಅ.30: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನಲ್ಲಿ ೨೦೨೪–೨೫ ನೇ ಸಾಲಿನ ಎನ್.ಎಸ್.ಎಸ್ ಘಟಕ ಉದ್ಘಾಟನೆಯನ್ನು ಎಂ.ಜಿ,ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎನ್.ಎಸ್.ಎಸ್ ಎಂಬುದು ಕೇವಲ ಪದ ಮಾತ್ರವಲ್ಲ ಬದಲಾಗಿ ಅದೊಂದು ಭಾವನೆ, ಮತ್ತು ಬಾಂಧವ್ಯ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇದು ಅತ್ಯಂತ ಉಪಯುಕ್ತ ಸಂಸ್ಥೆ ಎಂದರು. ಪ್ರಾಂಶುಪಾಲ ವಿಜಯ್ ಪಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಪೂಜಾ, ದೈಹಿಕ ಶಿಕ್ಷಣಾಧಿಕಾರಿ ವಕ್ಷತ್ ಸಾಲಿಯಾನ್, ಕಾಲೇಜಿನ ಎನ್.ಎಸ್.ಎಸ್ ಘಟಕದ ರಮ್ಯಾ, ರೇವಿತ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ದ್ವಿತೀಯ ಪದವಿ ವಿದ್ಯಾರ್ಥಿನಿ ಮಂಜುಳಾ ಸ್ವಾಗತಿಸಿ, ನಿಖಿತಾ ಅಥಿತಿಗಳನ್ನು ಪರಿಚಯಿಸಿ, ಧನುಷ್ ವಂದಿಸಿ, ಶರಣ್ಯ ಕಾರ್ಯಕ್ರಮ ನಿರೂಪಿಸಿದರು.
ಎನ್.ಎಸ್.ಎಸ್ ಘಟಕ ಉದ್ಘಾಟನೆ

ಎನ್.ಎಸ್.ಎಸ್ ಘಟಕ ಉದ್ಘಾಟನೆ
Date: