Saturday, February 15, 2025
Saturday, February 15, 2025

ಸಂಗೀತದಿಂದ ಮಾನಸಿಕ ಒತ್ತಡ ಶಮನ: ರವಿ ಕಾರಂತ್

ಸಂಗೀತದಿಂದ ಮಾನಸಿಕ ಒತ್ತಡ ಶಮನ: ರವಿ ಕಾರಂತ್

Date:

ಕೋಟ, ಅ.30: ಬದುಕಿನ ಮಾನಸಿಕ ಒತ್ತಡಕ್ಕೆ ಸಂಗೀತ ಔಷಧವಿದ್ದಂತೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಗೀತ ಅಭ್ಯಾಸ ಮಾಡಿಸುವುದರಿಂದ ಉತ್ತಮ ಹಾಡುಗಾರರನ್ನಾಗಿ ಮಾಡಲು ಸಾಧ್ಯ. ಸಂಗೀತ ಸ್ಪರ್ಧೆಯ ಆಯೋಜನೆಯಿಂದ ಹೊಸ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಸಹಕಾರಿ ಎಂದು ಸಂಗೀತಗಾರ, ಉಪನ್ಯಾಸಕ ರವಿ ಕಾರಂತ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ಯು ಚಾನೆಲ್ ಸಾದರಪಡಿಸಿದ ರಾಜ್ಯೋತ್ಸವ ಅಂಗವಾಗಿ ಕರಾವಳಿ ಕರ್ನಾಟಕ ಕನ್ನಡ ಕರವೊಕೆ ಗೀತಗಾಯನ ಸ್ಪರ್ಧೆ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಚಿಂತಕ ವೆಂಕಟೇಶ್ ಭಟ್, ಯು ಚಾನೆಲ್ ಸಂಚಾಲಕ ಪ್ರಸಾದ್ ರಾವ್, ಹಾಡುಗಾರರಾದ ಮಾಲಿನಿ ರಮೇಶ್, ಸುರೇಶ್ ಕಾರ್ಕಡ ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೊಡವೂರು: ವೈಭವದ ಶ್ರೀ ಮನ್ಮಹಾರಥೋತ್ಸವ

ಕೊಡವೂರು, ಫೆ.೧೫: ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವದ ಅಂಗವಾಗಿ...

ಶಿಕ್ಷಕ ಪ್ರಭಾಕರ ಕಾಮತ್‌ರಿಗೆ ಬಿಳ್ಕೋಡುಗೆ

ಕಾರ್ಕಡ, ಫೆ.15: ವೃತ್ತಿ ಬದುಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ಶಿಕ್ಷಕನ...

ಪರೀಕ್ಷಾ ಭಯ ಬೇಡ, ಹಬ್ಬವಾಗಿ ಆಚರಿಸಿ: ಆನಂದ ಸಿ ಕುಂದರ್

ಕೋಟ, ಫೆ.15: ನಮ್ಮ ಮಕ್ಕಳು ನಮ್ಮ ಸಂಪತ್ತು ಅವರ ಯಶಸ್ಸು ನಮ್ಮೆಲ್ಲರ...

ಶ್ರೀನಿವಾಸ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ, ಫೆ.15: ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಸಂಘಟಕರು ಆಯೋಜಿಸಿದ್ದಾರೆ. ಇದೊಂದು...
error: Content is protected !!