Friday, November 22, 2024
Friday, November 22, 2024

ಮಣಿಪಾಲ ಜ್ಞಾನಸುಧಾ: ಶಾರದಾ ಪೂಜೆ

ಮಣಿಪಾಲ ಜ್ಞಾನಸುಧಾ: ಶಾರದಾ ಪೂಜೆ

Date:

ಮಣಿಪಾಲ, ಅ.12: ಅಕ್ಟೋಬರ್‌ 12ರಂದು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ ಶಾರದಾ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಠ್ಯದ ಜೊತೆಗೆ ಸಂಸ್ಕೃತಿ – ಸಂಸ್ಕಾರಯುಕ್ತ ಶಿಕ್ಷಣದ ಅರಿವು ಮೂಡಿಸುವಂತಹ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಳ್ಳಬೇಕು ಎಂದು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸೇವಾ ಭಾರತಿ ಭಜನಾ ಮಂಡಳಿ, ಸಚ್ಚೇರಿಪೇಟೆ ಮುಂಡ್ಕೂರು ತಂಡದಿಂದ ಕುಣಿತ ಭಜನಾ ಸೇವೆಯು ಜರಗಿತು. ವಿದ್ಯಾರ್ಥಿಗಳು ಭಕ್ತಿ ಸುಧೆಯ ಗೀತ ಗಾಯನ, ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಟ್ರಸ್ಟಿ ವಿದ್ಯಾವತಿ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ದಿನೇಶ್‌ ಎಮ್‌ ಕೊಡವೂರು, ಕಾಲೇಜಿನ ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೆಂದ್ರ ನಾಯಕ್‌, ಪದ್ಮನಾಭ ಭಂಡಿ, ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್‌ ಟ್ರಸ್ಟ್‌ನ ಪಿ.ಅರ್.ಒ ಜ್ಯೋತಿ ಪದ್ಮನಾಭ ಭಂಡಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್‌ ಶೆಟ್ಟಿ, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್‌, ಉಪಪ್ರಾಂಶುಪಾಲರಾದ ಪ್ರಕಾಶ್‌ ಜೋಗಿ ಉಪಸ್ಥಿತರಿದ್ದರು.

ಮಣಿಪಾಲ ಜ್ಞಾನಸುಧಾ ಮತ್ತು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗಣಿತ ಶಾಸ್ತ್ರ ಉಪನ್ಯಾಸಕಿ ನಕ್ಷಾ ಕಲ್ಕೂರ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

ಉಡುಪಿ, ನ.21: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ...

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ, ನ.21: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ...

ನ.22: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ನ.21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ, ನ.21: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ...
error: Content is protected !!