ಕೋಟ, ಅ.5: ಭಾರತೀಯ ನೆಲದಲ್ಲಿ ಶರನ್ನವರಾತ್ರಿ ಉತ್ಸವಗಳು ತನ್ನದೆ ಆದ ತಳಹದಿಯನ್ನು ಹೊಂದಿವೆ ಇಂತಹ ಉತ್ಸವಗಳು ಹಿಂದೂ ಧರ್ಮದ ತಳಹದಿಗೆ ಭದ್ರ ಬುನಾದಿಯಾಗಿದೆ ಎಂದು ಸಾಸ್ತಾನ ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಪೂಜಾರಿ ಹೇಳಿದರು. ಪಾಂಡೇಶ್ವರದ ಕಳಿಬೈಲು ಶ್ರೀ ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಕೊಂಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಗುಲದ ಮೊಕ್ತೇಸರ ಎಂ.ಸಿ ಚಂದ್ರಶೇಖರ್, ದೇಗುಲದ ಮಾರ್ಗದರ್ಶಕ ಶಶಿಧರ್ ರಾವ್, ಸಾಮಾಜಿಕ ಚಿಂತಕರಾದ ಸುಧೀರ್ ಶೆಟ್ಟಿ ಕೆದೂರು, ಕೀರ್ತಿಶ್ ಪೂಜಾರಿ, ಬಾಲಾಜಿ ಭಜನಾ ಸಂಘದ ಅಧ್ಯಕ್ಷ ವಿಜಯ ಆಚಾರ್, ಸುಬ್ರಹ್ಮಣ್ಯ ಕಿರಿಮಂಜೇಶ್ವರ, ದೇಗುಲ ಪಾಕತಜ್ಞ ಸುದರ್ಶನ ಪೂಜಾರಿ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಹ ಅರ್ಚಕ ರಮೇಶ್ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ನಂತರ ಬಾಲಾಜಿ ಭಜನಾ ತಂಡ ಪಾಂಡೇಶ್ವರ ಇವರಿಂದ ಕುಣಿತ ಭಜನೆ ನಡೆಯಿತು.
ಶರನ್ನವರಾತ್ರಿ ಚೈತನ್ಯ ಹೆಚ್ಚಿಸುವ ಉತ್ಸವ: ವಿಜಯ್ ಪೂಜಾರಿ
ಶರನ್ನವರಾತ್ರಿ ಚೈತನ್ಯ ಹೆಚ್ಚಿಸುವ ಉತ್ಸವ: ವಿಜಯ್ ಪೂಜಾರಿ
Date: