ಕೋಟ, ಅ.4: ಕೋಟದ ರೈತಧ್ವನಿ ಸಂಘಟನೆ ಇದರ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೋಟ ಅಮೃತೇಶ್ವರಿ ದೇಗುಲದಲ್ಲಿ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ರೈತರ ಬೇಡಿಕೆಗಳಿಗೆ ಜಿಲ್ಲಾಡಳಿತದ ಮೂಲಕ ಸರಕಾರದ ಕದ ತಟ್ಟುವ ಕಾರ್ಯ ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ರೈತರ ಸಮಸ್ಯೆಗಳನ್ನು ಆಡಳಿತ ಚೌಕಟ್ಟಿನಲ್ಲಿ ಬಗೆಹರಿಸಿ ಪ್ರಸ್ತುತ ಎದುರಾಗಿರುವ ಭತ್ತಕ್ಕೆ ನೈಜ ಬೆಲೆ ಹಾಗೂ ನೆರೆ ಹಾವಳಿಗೆ ತುತ್ತಾಗುವ ಕೃತಕ ನೆರೆಗೆ ಮುಕ್ತಗಾಣಿಸಲು ಯೋಜನೆ ಸಿದ್ಧಪಡಿಸಿ ರೈತ ಸಮುದಾಯಕ್ಕೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ಆಗಬೇಕು, ಅದು ಸಂಘಟನೆಗಳ ಹೋರಾಟದ ಹಾದಿಯಿಂದ ಮಾತ್ರ ಸಾಧ್ಯ. ಈ ದಿಸೆಯಲ್ಲಿ ಹೊಸ ನೋಂದಣಿ ಅಭಿಯಾನ ಮತ್ತಷ್ಟು ಬಲ ತುಂಬಲು ಸಾಧ್ಯವಾಗುತ್ತದೆ. ಪ್ರತಿಯೋರ್ವ ರೈತರು ಈ ಅಭಿಯಾನಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು. ಸಂಘಟನೆಯ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ರೈತ ಸಂಘಟನೆಯ ಪ್ರಮುಖರಾದ ಎಂ. ಶಿವ ಪೂಜಾರಿ, ಬಾಬು ಶೆಟ್ಟಿ, ಮಹೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಭಾಸ್ಕರ್ ಶೆಟ್ಟಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಮೇಶ್ ಮೆಂಡನ್, ಕೀರ್ತಿಶ್ ಪೂಜಾರಿ, ದಿನೇಶ್ ಪೂಜಾರಿ, ಸಂತೋಷ್ ಕುಮಾರ್, ಸುರೇಶ್ ಕೋಟ, ತಿಮ್ಮ ಕಾಂಚನ್, ನಿತ್ಯಾನಂದ, ಪ್ರಕಾಶ್ ಶೆಟ್ಟಿ ಸೇರಿದಂತೆ ಮುಂತಾದವರು ಇದ್ದರು.
ರೈತಧ್ವನಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ರೈತಧ್ವನಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
Date: