Monday, January 20, 2025
Monday, January 20, 2025

ಅ.3 ರಿಂದ 11: ಬೆಳ್ಮಣ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಅ.3 ರಿಂದ 11: ಬೆಳ್ಮಣ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Date:

ಬೆಳ್ಮಣ್ಣು, ಅ.1: ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ಬೆಳ್ಮಣ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ದಿನ ಸಂಜೆ ಗಂಟೆ 6 ರಿಂದ ರಾತ್ರಿ 8 ರವರೆಗೆ ಅಕ್ಟೋಬರ್ 3 ರಂದು ಗುರುವಾರ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ಬೆಳ್ಮಣ್ಣು ಶ್ರೀ ವಿಠೋಬಾ ರುಕ್ಮಾಯಿ ಭಜನಾ ಮಂಡಳಿಯ ಸದಸ್ಯರಿಂದ ‘ಹರಿ ಸಂಕೀರ್ತನೆ’ ಅಕ್ಟೋಬರ್ 4 ರಂದು ಶುಕ್ರವಾರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ – ಮೀನಾಕ್ಷಿ ಕಲ್ಯಾಣ ಅಕ್ಟೋಬರ್ 5 ರಂದು ಶನಿವಾರ ಬೆಳ್ಮಣ್ಣು ಜೇಸಿಐ ಸಂಗೀತ ಮತ್ತು ನೃತ್ಯ ಶಾಲೆಯಿಂದ ಭರತನಾಟ್ಯ, ನೃತ್ಯ ರೂಪಕ ಮತ್ತು ಸಂಗೀತ ಕಾಯಕ್ರಮ ಅಕ್ಟೋಬರ್ 6 ರಂದು ಆದಿತ್ಯವಾರ ಶ್ರೀ ಶಾರದ ನಾಟ್ಯಲಯ ಕುಳಾಯಿ, ಹೊಸಬೆಟ್ಟು ಇವರಿಂದ ‘ನೃತ್ಯ ಸಂಭ್ರಮ’ ಅಕ್ಟೋಬರ್ 7 ರಂದು ಸೋಮವಾರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಶೋಭಾನೆ ಬಳಗದವರಿಂದ ಪೌರಣಿಕ ನಾಟಕ ಅಕ್ಟೋಬರ್ 8 ರಂದು ಮಂಗಳವಾರ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ಯಕ್ಷಗಾನ ತಾಳಮದ್ದಳೆ ‘ಧ್ರುವ ಚರಿತ್ರೆ’ ಅಕ್ಟೋಬರ್ 9 ರಂದು ಬುಧವಾರ ಬೋಳ ನಮಿತಾ ಮತ್ತು ಬಳಗದವರಿಂದ ‘ಭಕ್ತಿ ರಸಮಂಜರಿ ಕಾರ್ಯಕ್ರಮ’ ಅಕ್ಟೋಬರ್ 10 ರಂದು ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇದರ ಸದಸ್ಯರಿಂದ ಅಮರನಾಥನ ಅಮರ ಕಥೆ ಶಿವ ಕಥಾ ಕಿರುನಾಟಕ ದೃಶ್ಯರೂಪಕ ಅಕ್ಟೋಬರ್ 11 ರಂದು ಶುಕ್ರವಾರ ರಾಘವೇಂದ್ರ ಕಿಗ್ಗ ಅವರಿಂದ
‘ಸಂಗೀತ ಸಂಭ್ರಮ’ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ನವರಾತ್ರಿಯ ಪ್ರತಿದಿನ ಸಂಜೆ 6.30ರಿಂದ ರಾತ್ರಿ 8 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ನೃತ್ಯ ಭಜನಾ ಕಾರ್ಯಕ್ರಮ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!