ಕೋಟ: ಯುವ ಸಮುದಾಯ ಸಮಾಜದ ಅವಿಭಾಜ್ಯ ಅಂಗ. ಇಂಥಹ ಯುವ ಪಡೆಗಳು ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದು ಉಡುಪಿ ಆದರ್ಶ ಆಸ್ಪತ್ರೆ ಇದರ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್ ಚಂದ್ರಶೇಖರ ಹೇಳಿದರು.
ಕೋಟದ ಮಣೂರು ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ಇದರ ಆಶ್ರಯದಲ್ಲಿ ವರ್ಷೋತ್ಸವ `ಸ್ಪರ್ಶ’ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಂಘ ಸಂಸ್ಥೆಗಳು ಸಾಂಸ್ಕೃತಿಕ ಚಿಂತನೆಗಳೊಂದಿಗೆ ಶೈಕ್ಷಣಿಕ
ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿರುವುದು ಪ್ರಶಂನೀಯ.
ಈ ವ್ಯವಸ್ಥೆ ಪ್ರತಿಯೊಂದು ಸಂಘ ಸಂಸ್ಥೆಗಳ ಮೂಲಕ
ನಡೆದರೆ ಆ ಭಾಗಗಳು ಸಮೃದ್ಧಗೊಳ್ಳುತ್ತವೆ. ಸ್ಪರ್ಶ ಎಂಬ
ಶೀರ್ಷಿಕೆ ಮನಮುಟ್ಟವಂತೆ ಕಾರ್ಯಕ್ರಮ ಸಂಯೋಜಿಸಿಕೊಂಡಿದೆ. ಇಂಥಹ ಯುವಕರ ಪಡೆ ಗ್ರಾಮ ಗ್ರಾಮಗಳಲ್ಲಿ ಪಸರಿಸಲಿ ಎಂದು ಶುಭ ಹಾರೈಸಿದರು.
ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ, ಬಾಳೆಬೆಟ್ಟು ಫ್ರೆಂಡ್ಸ್ ಹಾಗೂ ಭಗತ್ ಸಿಂಗ್ ಯುವ ವೇದಿಕೆ ಉತ್ತಮ ಯುವ ಬಲವನ್ನು ಹೊಂದಿದೆ. ಸಂಘಟನೆಯ ಒಗ್ಗಟ್ಟು
ಇದೇ ರೀತಿ ಮುಂದುವರಿಯಲಿ ಎಂದರು.
ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಅಧ್ಯಕ್ಷ ರತ್ನಾಕರ ಪೂಜಾರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಿರಿಯ ರಂಗಕರ್ಮಿ, ನಿವೃತ್ತ ಮುಖ್ಯ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್‌ರಿಗೆ ಹುಟ್ಟೂರು ಸಮ್ಮಾನ ನೀಡಿ ಗೌರವಿಸಲಾಯಿತು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ
ರವೀಂದ್ರ ಶೆಟ್ಟಿ, ನವೀನ್ ಪೂಜಾರಿಯವರನ್ನು
ಗೌರವಿಸಲಾಯಿತು.
ಸ್ಥಳೀಯ ಶೈಕ್ಷಣಿಕ ಸಾಧಕರಾದ ಪ್ರತೀಕ್ಷ, ಮಾನ್ಯ, ಸುಧೀರ್
ನಾಯಕ್, ಶ್ರೀರಕ್ಷಾ ಶೆಟ್ಟಿ, ಕಾರ್ತಿಕ ಅವರನ್ನು ವಿಶೇಷವಾಗಿ
ಅಭಿನಂದಿಸಲಾಯಿತು.
ಅಕ್ಷರ ದಾಸೋಹ ಶೈಕ್ಷಣಿಕ ಹೆಸರಿನಲ್ಲಿ ಬಡ ವಿದ್ಯಾರ್ಥಿ ನಿಶಾಂತ ಬಾಳೆಬೆಟ್ಟು ಇವರನ್ನು ದತ್ತು ಸ್ವೀಕರಿಸಲಾಯಿತು.
ಸ್ಥಳೀಯ ಮಣೂರು ಶ್ರೀ ರಾಮಪ್ರಸಾದ ಶಾಲೆಯ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ವೇಳೆ ಪೆರ್ಡೂರು ಮೇಳದ ವ್ಯವಸ್ಥಾಪಕ ವೈ. ಕರುಣಾಕರ
ಶೆಟ್ಟಿಯವರನ್ನು ಗೌರವಿಸಲಾಯಿತು.
ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಕೊಲ್ಲೂರು ದೇವಳದ ಟ್ಟಸ್ಟಿ ಬೆಳ್ವೆ ಗಣೇಶ್ ಕಿಣಿ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ದೇವೀಂದ್ರ ಎಸ್. ಬಿರಾದರ್, ಉದ್ಯಮಿ ಕುಶಲ್ ಶೆಟ್ಟಿ ಬಾಳೆಬೆಟ್ಟು, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೊಲ್ಲ, ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ, ಮಣೂರು
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಚ್. ಕುಂದರ್, ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಬ್ರಾಯ ಆಚಾರ್ಯ,ಗುತ್ತಿಗೆದಾರ ಜಗದೀಶ್ ಕೆದೂರು, ಸಚಿವ ಕೋಟ ಆಪ್ತ ಸಹಾಯಕ ವಿವೇಕ್ ಅಮೀನ್, ಪಿ.ಡಿ.ಓ ಗಿರೀಶ್ ಕುಮಾರ್ ಶೆಟ್ಟಿ, ಆಯುರ್ವೇದ ವೈದ್ಯ ಡಾ. ವಾಸುದೇವ ಉರಾಳ ಮಣೂರು ಉಪಸ್ಥಿತರಿದ್ದರು.
ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು.
ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಬಾಳೆಬೆಟ್ಟು ಫ್ರೆಂಡ್ಸ್ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದಿಸಿದರು.