Tuesday, November 26, 2024
Tuesday, November 26, 2024

ವಿದ್ಯಾಪೋಷಕ್‍ನ 24ನೇ ಮನೆ ಹಸ್ತಾಂತರ

ವಿದ್ಯಾಪೋಷಕ್‍ನ 24ನೇ ಮನೆ ಹಸ್ತಾಂತರ

Date:

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್ ಫಲಾನುಭವಿ ಅಕ್ಷಯ್ ಕುಮಾರ್ ಮತ್ತು ಅವನ ತಂದೆ ಯಕ್ಷಗಾನ ಹಿಮ್ಮೇಳ ವಾದಕ ಹೆರಂಜಾಲು ಬಾಲಕೃಷ್ಣ ಗಾಣಿಗ ಇವರಿಗೆ ನಾಗೂರಿನಲ್ಲಿ ನಿರ್ಮಿಸಿಕೊಟ್ಟ ಮನೆ ‘ಸಾಯಿಮಯಿ’ಯ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.

ಪ್ರಾಯೋಜಕರಾದ ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್.ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಮನೆಯಲ್ಲಿ ನೆಮ್ಮದಿಯಿಂದ ಬದುಕಿ ದೊಡ್ಡ ಸಾಧನೆ ಮಾಡಿ ಉಳಿದವರಿಗೆ ಆಸರೆಯಾಗಬೇಕೆಂದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಸಂಸ್ಥೆಯ ದಾನಿ ಪಿ.ಗೋಕುಲನಾಥ ಪ್ರಭು ಮಾತನಾಡಿ, ತಮ್ಮ ಮಾತೃಶ್ರೀಯವರ 100ನೇ ವರ್ಷದ ಪ್ರಯುಕ್ತ ಒಂದು ಮನೆಯನ್ನು ಸಂಸ್ಥೆಯ ಮೂಲಕ ನಿರ್ಮಿಸಿ ಕೊಡಬೇಕೆಂದು ಸಂಕಲ್ಪಿಸಿರುವುದಾಗಿ ತಿಳಿಸಿದರು.

ಪ್ರೊ. ಎಂ.ಎಲ್ ಸಾಮಗ ಡಾ. ಜೆ.ಎನ್.ಭಟ್ ಇವರನ್ನು ಪರಿಚಯಿಸಿದರು. ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಕಲಾವಿದ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ ಸಂಸ್ಥೆಯ ಕೆಲಸಕ್ಕೆ ಸಮಾಜದ ದಾನಿಗಳು ಮುಕ್ತಹಸ್ತದಿಂದ ಸಹಾಯ ಮಾಡುತ್ತಿರುವುದನ್ನು ನೆನಪಿಸಿಕೊಂಡು ಪಿ. ಗೋಕುಲನಾಥ ಪ್ರಭು, ಡಾ. ಜೆ.ಎನ್.ಭಟ್ ರಂತಹ ದಾನಿಗಳು ಸಂಸ್ಥೆಯ ಆಸ್ತಿ ಎಂದು ಹೇಳಿದರು.

ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಯಕ್ಷಗಾನ ಕಲಾರಂಗ ವಿದ್ಯಾಪೊಷಕ್ ವಿದ್ಯಾರ್ಥಿಗಳಿಗೆ ನಿರ್ಮಿಸಿದ 24ನೇ ಮನೆಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...

ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ, ನ.26: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ...

ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.25: ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ...
error: Content is protected !!