Sunday, January 19, 2025
Sunday, January 19, 2025

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

Date:

ಉಡುಪಿ, ಸೆ.3: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಲಾಗಿರುವ ಘಟಕವಾರು/ವರ್ಗವಾರು ಗುರಿಗಳ ವಿವರ ಇಂತಿದೆ- ಹೊಸ ಮೀನು ಕೃಪಿ ಕೊಳಗಳ ನಿರ್ಮಾಣ (Construction of Biofloc ponds for freshwater ares including Inputs of Rs.4lakhs/ha), ಕಡಲಚಿಪ್ಪು ಕೃಷಿ -ಮಸ್ಸೆಲ್ಸ್, ಕಲ್ಲ, ಕ್ಲಾಮ್ಸ್, ಮತ್ತು ಇತ್ಯಾದಿ (Bivalve cultivation (mussels, clams, pearl etc.),ಬ್ಯಾಕ್ ಯಾರ್ಡ್ ಮಿನಿ ಆರ್.ಎ.ಎಸ್ ಘಟಕ ಸ್ಥಾಪನೆ (Establishment of Backyard mini RAS Units), 30 ಟನ್ ಸಾಮರ್ಥ್ಯದ ಐಸ್ ಪ್ಲಾö್ಯಂಟ್/ಕೋಲ್ಡ್ ಸ್ಟೋರೇಜ್ ನಿರ್ಮಾಣ (Construction of Ice plant/Cold storage of 30 ton capacity), ಐಸ್ ಪ್ಲ್ಯಾಂಟ್/ಕೋಲ್ಡ್ ಸ್ಟೋರೇಜ್ ಗಳ ನವೀಕರಣ (Modernization of Ice plant/Cold storage), ಮೋಟಾರ್ ಸೈಕಲ್‌ನೊಂದಿಗೆ ಐಸ್ ಬಾಕ್ಸ್ (Motor cycle with ice box), ಕಮ್ಯುನಿಕೇಶನ್ ಮತ್ತು ಟ್ರ್ಯಾಕಿಂಗ್ ಡಿವೈಸ್ ಗಳನ್ನು ಹೊರತುಪಡಿಸಿ ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಸುರಕ್ಷತಾ ಕಿಟ್‌ಗಳನ್ನು ಒದಗಿಸಲು ಬೆಂಬಲ (Support for providing safety kits for fishermen of traditional and motorize fishing vessels other than communication and tracking devises), ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಕಮ್ಯೂನಿಕೇಶನ್ ಮತ್ತು ಟ್ರಾö್ಯಕಿಂಗ್ ಉಪಕರಣಗಳು (Communication and tracking devises for traditional and motorized fishing vessels), ಸಾಂಪ್ರದಾಯಿಕ ಮೀನುಗಾರರಿಗೆ (ಬದಲಿ) ದೋಣಿ ಮತ್ತು ಬಲೆ ಒದಗಿಸುವುದು (Providing boats (replacement) and nets foe traditional fishermen) ಹಾಗೂ ಆಳ ಸಮುದ್ರ ಗಿಲ್ ನೆಟ್ ಯಾಂತ್ರೀಕೃತ ಬೋಟ್ ನಿರ್ಮಾಣಕ್ಕೆ ಸಹಾಯ (Support for acquisition of Deep sea fishing vessels for traditional fishermen).

ಅರ್ಜಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!