ಉಡುಪಿ: ಭೂ ಸುಧಾರಣಾ ಕಾನೂನು ಜಾರಿಯಾಗಿ ಪ್ರಸ್ತುತ 50 ವರ್ಷಗಳಾದ ಪ್ರಯುಕ್ತ ಉಡುಪಿ ಜಿಲ್ಲಾ ಕಾಂಗ್ರೆಸ್ 19.03.2022 ರಂದು ಹಿರಿಯಡ್ಕ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕರೆ ನೀಡಿದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡಿ ಉಳುವವನೇ ಹೊಲದೊಡೆಯನಾಗಬೇಕೆಂಬ ಉದ್ದೇಶದಿಂದ 50 ವರ್ಷಗಳ ಹಿಂದೆ ತಂದ ಭೂ ಮಸೂದೆ ಕಾಯ್ದೆ ರಾಜ್ಯದಲ್ಲಿ ಕ್ರಾಂತಿಗೆ ಕಾರಣವಾಯ್ತು. ಈ ಮಸೂದೆಯಿಂದ ಹಲವಾರು ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆಗೊಂಡಿರುವುದನ್ನು ಮರೆಯಲಾಗದು. ಈ ಹಿನ್ನಲೆಯಲ್ಲಿ ಮಸೂದೆಯ ಫಲಾನುಭವಿಗಳು ಇಂದಿಗೂ ಕೃಷಿಯನ್ನು ನೆಚ್ಚಿಕೊಂಡು ಘೋಷಣೆಯನ್ನು ಸಾಕಾರಗೊಳಿಸಿದ ಕುಟುಂಬವನ್ನು ಗುರುತಿಸುವ ಕಾರ್ಯಕ್ರಮ ಇದೆ ಎಂದರು.
ಸಭೆಯಲ್ಲಿ ಮುಖಂಡರಾದ ದಿನೇಶ್ ಪುತ್ರನ್, ಪ್ರಖ್ಯಾತ್ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಕೃಷ್ಣಮೂರ್ತಿ ಕಾರ್ಕಳ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಲೆವೂರು ಹರೀಶ್ ಕಿಣಿ, ಜ್ಯೋತಿ ಹೆಬ್ಬಾರ್, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಬಾಲಕೃಷ್ಣ ಪೂಜಾರಿ, ಕಿಶೋರ್ ಎರ್ಮಾಳ್, ಸೌರಭ್ ಬಲ್ಲಾಲ್, ರಮೇಶ್ ಕಾಂಚನ್, ದಿನಕರ್ ಹೇರೂರು, ದೀಪಕ್ ಕೋಟ್ಯಾನ್, ಉದ್ಯಾವರ ನಾಗೇಶ್ ಕುಮಾರ್, ಉಪೇಂದ್ರ ಮೆಂಡನ್, ದೀವಾ ನಂಬಿಯಾರ್, ಸತೀಶ್ ಕುಮಾರ್ ಮಂಚಿ, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.
ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.