ಬ್ರಹ್ಮಾವರ, ಆ.1: ಸಮೃದ್ಧಿ ಮಹಿಳಾ ಮಂಡಳಿ (ರಿ) ಪೇತ್ರಿ ಚೇರ್ಕಾಡಿ ಆಷಾಢದಲ್ಲಿ ಒಂದು ದಿನ ಹಾಗೂ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ಸಮೃದ್ಧಿ ಮಹಿಳಾ ಮಂಡಲದಲ್ಲಿ ಜರಗಿತು. ಸಮೃದ್ಧಿ ಸಂಜೀವಿನಿ ಸಂಘದ ಅಧ್ಯಕ್ಷರಾದ ಯಶೋಧ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣ ನಾಯ್ಕ್, ನಮ್ಮ ಪೂರ್ವಜರ ಜೀವನ ಪದ್ಧತಿ ಆಹಾರ ಕ್ರಮ ನೆನಪಿಸಿಕೊಂಡರು. ತಾಲೂಕು ಸಂಜೀವಿನಿ ಸಂಪನ್ಮೂಲ ವ್ಯಕ್ತಿ ಹೇಮಾ ಜಗನ್ನಾಥ್, ಆಷಾಢದಲ್ಲಿ ಉಪಯೋಗಿಸುವ ಪ್ರಾಕೃತಿಕ ಸಸ್ಯಗಳ ಔಷಧಿ ಗುಣಗಳ ಬಗ್ಗೆ ಮಾಹಿತಿ ನೀಡಿದರು.
ಪೇತ್ರಿ ಸಮುದಾಯ ಆರೋಗ್ಯ ಅಧಿಕಾರಿ ಜ್ಯೋತಿ, ಪರಿಸರ ಸ್ವಚ್ಛತೆ ಡೆಂಗ್ಯೂ ಬಗ್ಗೆ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ, ಲತಾ ಡಿ ಶೆಟ್ಟಿ ಸ್ವಾಗತಿಸಿದರು.
ಪ್ರತಿಮಾ ಆಚಾರ್ಯ ಆಷಾಢ ತಿನಿಸುಗಳ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಅರ್ಚನಾ ಭಟ್ ವಂದಿಸಿ, ಕಾರ್ಯದರ್ಶಿ ಶಾರದಾ ಎಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.