ಉಡುಪಿ, ಜು.26: ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆಯುವ ಶ್ರೀಕೃಷ್ಣ ಮಾಸೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡುತ್ತಾ, ಈ ಬಾರಿ ಉಡುಪಿಯ ಪ್ರಸಿದ್ಧ ಹಬ್ಬವಾದ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಮಾಸೋತ್ಸವ, ಡೋಲೋತ್ಸವ, ಲಡ್ಡೂತ್ಸವ ಎಂಬಿತ್ಯಾದಿಯಾಗಿ ಹಲವು ವಿಧದಲ್ಲಿ ಆಚರಿಸಲು ಸಂಕಲ್ಪಿಸಲಾಗಿದೆ ಎಂದರು. ವಿದ್ವಾಂಸರ ಸಭೆಯಲ್ಲಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಈ ಶ್ರೀಕೃಷ್ಣ ಮಾಸೋತ್ಸವ ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪುತ್ತಿಗೆ ಕಿರಿಯ ಶ್ರೀಪಾದರು, ಮಠದ ಆಡಳಿತ ವರ್ಗದವರು, ವಿದ್ವಾಂಸರು ಉಪಸ್ಥಿತರಿದ್ದರು.
‘ಶ್ರೀಕೃಷ್ಣ ಮಾಸೋತ್ಸವ’ ಆಮಂತ್ರಣ ಪತ್ರಿಕೆ ಬಿಡುಗಡೆ
‘ಶ್ರೀಕೃಷ್ಣ ಮಾಸೋತ್ಸವ’ ಆಮಂತ್ರಣ ಪತ್ರಿಕೆ ಬಿಡುಗಡೆ
Date: