ಉಡುಪಿ, ಜೂ.20: ಹಿರಿಯ ನಾಗರಿಕರು ಸಾಮಾಜಿಕ, ದೈಹಿಕ, ಸಾಂಸಾರಿಕ, ಮಾನಸಿಕವಾಗಿ, ದೌರ್ಜನ್ಯ, ಕಿರುಕುಳ, ಹಿಂಸೆ, ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಕೌಟುಂಬಿಕ ಸಮಸ್ಯೆ, ಮಕ್ಕಳ ಬೇಜವಬ್ದಾರಿತನ, ದುರ್ಬಲತೆ, ಅಸಹಾಯಕತೆ, ಅಭದ್ರತೆ ಮುಂತಾದ ರಕ್ಷಣೆಯಿಲ್ಲದ ಸಂದಿಗ್ಧ ಪರಿಸ್ಥಿತಿಗೆ ಒಳಗಾದ ಸಂದರ್ಭದಲ್ಲಿ ಹಿರಿಯ ನಾಗರಿಕರ ಉಚಿತ ಸಹಾಯವಾಣಿ (ಟೋಲ್ ಫ್ರೀ ನಂಬರ್) 1090 ಅಥವಾ ದೂ.ಸಂಖ್ಯೆ: 0820-2526394 ಅನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಬನ್ನಂಜೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿರಿಯ ನಾಗರಿಕರ ಸಹಾಯವಾಣಿ ಸ್ಥಾಪನೆ
ಹಿರಿಯ ನಾಗರಿಕರ ಸಹಾಯವಾಣಿ ಸ್ಥಾಪನೆ
Date: