ಉಡುಪಿ, ಜೂ.7: ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇಲ್ಲಿ ವಸಂತ ಮಾಸದ ಪ್ರಯುಕ್ತ ಸ್ವಯಂಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ಈ ವರ್ಷದ ಕೊನೆಯ ವಸಂತೋತ್ಸವವು ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕ ದಯಾಘನ್ ಭಟ್ ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿಸಿದರು. ಶ್ರೀ ದೇವರಿಗೆ ಸ್ವರ್ಣ ಪಲ್ಲಕ್ಕಿ ಉತ್ಸವ, ವೇದಘೋಷ, ಭಜನೆ, ವಿವಿಧ ಮಂಗಳವಾದ್ಯದೊಂದಿಗೆ ಲಾಲ್ಕಿ ಉತ್ಸವ ನಡೆಯಿತು.
ಬಳಿಕ ಅಷ್ಠಾವಧಾನ ಸೇವೆ, ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಗಣೇಶ್ ಕಿಣಿ, ಭಜನಾ ಸಮಿತಿಯ ರೂವಾರಿ ಸತೀಶ್ ಕಿಣಿ, ಚೇ೦ಪಿ ರಾಮಚಂದ್ರ ಭಟ್, ವಿಶಾಲ್ ಶೆಣೈ, ಸತೀಶ್ ಕಾಮತ್, ದೀಪಕ್ ಭಟ್, ಗಿರೀಶ್ ಭಟ್, ನರಹರಿ ಪೈ, ಪ್ರದೀಪ್ ರಾವ್, ಯುವಕ ಮಂಡಲದ ಅಧ್ಯಕ್ಷ ನಿತೇಶ ಶೆಣೈ, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಲಕ್ಷ್ಮಿ ವೆಂಕಟೇಶ ಭಗನಿ ವೃಂದ ಹಾಗು ಜಿ.ಎಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಹಾಗೂ ನೂರಾರು ಸಮಾಜಬಾಂಧವರು ಉಪಸ್ಥಿತರಿದ್ದರು.