ಕಟಪಾಡಿ, ಜೂ.6: ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿಯ ಹೊಸ ಶೈಕ್ಷಣಿಕ ವರ್ಷ ಪ್ರಾರಂಭಿಸುವ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಧ್ವರಾಜ್ ಭಟ್ ನೇತೃತ್ವದಲ್ಲಿ ಪೂಜಾ ವಿಧಾನ ನೆರವೇರಿಸಿದರು, ಶಿಕ್ಷಕಿ ಸುಮಾ ಕಿರಣ್ ಅಕ್ಷರಾಭ್ಯಾಸ ಕಾರ್ಯಕ್ರಮದ ಮಹತ್ವ ತಿಳಿಸಿದರು. ಹುಟ್ಟಿನಿಂದ ಮಕ್ಕಳಿಗೆ ಸಂಸ್ಕಾರವನ್ನು ಸರಿಯಾಗಿ ಕಲಿಸಿದರೆ ಮುಂದೆ ಅವರು ದೊಡ್ಡವರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ ಎಂಬ ದ್ಯೇಯದೊಂದಿಗೆ ಹೊಸತನವನ್ನು ಸದಾ ಮುಂಚೂಣಿಯಲ್ಲಿ ನಡೆಸಿ ಜೊತೆ ಜೊತೆಗೆ ಶೈಕ್ಷಣಿಕವಾಗಿಯೂ ಉತ್ತಮ ಹೆಸರು ಸಂಪಾದಿಸಿರುವ ಆನಂದತೀರ್ಥ ವಿದ್ಯಾಲಯ ಕರ್ನಾಟಕದ ಪ್ರತೀ ಜಿಲ್ಲೆಯಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ, ಜಿಲ್ಲೆಯ ಮುಂಚೂಣಿ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯುತ್ತಿದೆ. ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಸಂಸ್ಥೆಯ ಪ್ರಿನ್ಸಿಪಲ್ ಡಾ. ಗೀತಾ ಎಸ್. ಕೋಟ್ಯಾನ್, ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಂತ್ರಿಕ ವಿಭಾಗದ ಛಾಯಾ ಕೋಟ್ಯಾನ್, ಪೂರ್ಣಿಮ, ನಿಶ್ಮಿತಾ, ವರ್ಷಿತಾ, ಪ್ರಸನ್ನ ಸಹಕರಿಸಿದರು.
ಆನಂದತೀರ್ಥ ವಿದ್ಯಾಲಯ: ಅಕ್ಷರಾಭ್ಯಾಸ ಕಾರ್ಯಕ್ರಮ
ಆನಂದತೀರ್ಥ ವಿದ್ಯಾಲಯ: ಅಕ್ಷರಾಭ್ಯಾಸ ಕಾರ್ಯಕ್ರಮ
Date: