Tuesday, October 8, 2024
Tuesday, October 8, 2024

ನಿರಂತರ ಕಲಿಕೆಯಿಂದ ಕೌಶಲ್ಯ ವೃದ್ಧಿ: ಡಾ. ಭಾಸ್ಕರ್ ಶೆಟ್ಟಿ

ನಿರಂತರ ಕಲಿಕೆಯಿಂದ ಕೌಶಲ್ಯ ವೃದ್ಧಿ: ಡಾ. ಭಾಸ್ಕರ್ ಶೆಟ್ಟಿ

Date:

ಉಡುಪಿ, ಜೂ.6: ರಂಗ ಅಭಿನಯ, ಅಭಿನಯ ಕಲೆ, ರಂಗ ಕೌಶಲ್ಯಗಳಿಗೆ ನಿಕಟವಾದ ಸಂಬಂಧವಿದ್ದು, ಜಾಗತೀಕರಣ ಮತ್ತು ಜಾಗತೀಕರಣೋತ್ತರ ಸಂದರ್ಭದ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಕಲಿಕೆ ನಿಂತ ನೀರಾಗಬಾರದು, ನಿರಂತರವಾಗಿದ್ದರೆ ಮಾತ್ರ ಕೌಶಲ್ಯವನ್ನು ಗಳಿಸಲು ಸಾಧ್ಯ ಎಂದು ಡಾ. ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ.ಎಸ್ ಹೇಳಿದರು. ಅವರು ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಸಭಾಂಗಣದಲ್ಲಿ ನಡೆದ ಅಭಿನಯ ಕಲೆಯಿಂದ ಕೌಶಲ್ಯ ಅಭಿವೃದ್ಧಿ- ಒಂದು ದಿನದ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿ, ಅರ್ಥಗರ್ಭಿತ ಜೀವನ ಕಟ್ಟಿಕೊಳ್ಳಲು ರಂಗ ತರಬೇತಿ ಶಿಬಿರಗಳು ಉಪಯುಕ್ತವಾಗಿವೆ. ಅಂತಹ ಕೌಶಲ್ಯವನ್ನು ಬೆಳೆಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು. ರಂಗ ತರಬೇತಿ ಶಿಬಿರವು ರಂಗ ನಿರ್ದೇಶಕ ಬಾಸುಮ ಕೊಡಗು ಇವರ ಸಾರಥ್ಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಂಗ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಉಪನ್ಯಾಸಕ ಚಂದ್ರ ನಿರೂಪಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಣೇಶ್ ಪ್ರಸಾದ್ ಜಿ. ನಾಯಕ್ ಅವರಿಗೆ ಪಿ.ಎಚ್.ಡಿ

ಉಡುಪಿ, ಅ.7: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ...

ಉಡುಪಿ: ದಿಢೀರ್ ಮಳೆ; ಸಿಡಿಲಾರ್ಭಟ

ಉಡುಪಿ, ಅ.7: ಉಡುಪಿ ಜಿಲ್ಲೆಯ ಹಲವೆಡೆ ಸಂಜೆ ದಿಢೀರನೆ ಸುರಿದ ಗಾಳಿ...

ಸ್ಥಳೀಯರಿಗೆ ತೊಂದರೆಯಾಗದಂತೆ ಹೋಂ ಸ್ಟೇ, ರೆಸಾರ್ಟ್ಗಳು ಕಾರ್ಯನಿರ್ವಹಿಸುವಂತೆ ಸೂಚನೆ

ಉಡುಪಿ, ಅ.7: ಜಿಲ್ಲೆಯ ಕೆಲವು ಹೋಂ ಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಪ್ರವಾಸೋದ್ಯಮ...

ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಜಿಲ್ಲಾಧಿಕಾರಿ

ಉಡುಪಿ, ಅ.7: ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದು, ಮುಂದಿನ ಪೀಳಿಗೆಗೆ...
error: Content is protected !!